ರೈತರಿಗೆ ಕೋವಿಡ್ ತರಹ ಕಾಡುತ್ತಿರುವ ಬಿಜೆಪಿ ಸರ್ಕಾರ: ಸಿದ್ದುಗೌಡ ಆರೋಪ

0
112

ಚಿತ್ತಾಪುರ: ರಾಜ್ಯ ಮತ್ತು ದೇಶದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಸರ್ಕಾರ ರೈತರಿಗೆ ಕೋವಿಡ್ ತರಹ ಕಾಡುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ.ಜಿ. ಅಫಜಲಪುರಕರ್ ಆರೋಪಿಸಿದ್ದಾರೆ.

ಅವರು ಪತ್ರಿಕೆ ಹೇಳಿಕೆ ನೀಡುವುದರ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ತಂದು ರೈತರ ಏಳಿಗೆಗೆ ಕಾಡುತ್ತಿದೆ ಎಂದರು.

Contact Your\'s Advertisement; 9902492681

ರೈತರಿಗೆ ಕೋವಿಡ್ ತರಹ ಕಾಡುತ್ತಿರುವ ಬಿಜೆಪಿ ಸರ್ಕಾರ: ಸಿದ್ದುಗೌಡ ಆರೋಪ

ರೈತರು ನಡೆಸುತ್ತಿರುವ ಹೋರಾಟಕ್ಕೆ ತಿಂಗಳುಗಟ್ಟಲೇ ಕಳೆದರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಡೆಗೆ ತಿರುಗಿಯು ಸಹ ನೋಡದೆ ರೈತರ ಆತ್ಮ ಗೌರವಕ್ಕೆ ದಕ್ಕೆ ಉಂಟು ಮಾಡಿದ ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದಾರೆ. “ಸಬಕಾ ಸಾತ್ ಸಬಕಾ ವಿಕಾಸ್”ಎಂದು ಹೇಳುವ ಪ್ರಧಾನ ಮಂತ್ರಿಗಳ ಹೇಳಿಕೆ ಸಬ್ ಕೆ ಸಾತ್(ರೈತರ)ಕಿಸಾನ್ ಕಾ ಸರ್ವನಾಶ ಎಂಬ ರೀತಿಯಲ್ಲಿ ವರ್ತಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ದೇಶದ ಆರ್ಥಿಕತೆಯನ್ನು ಹಾಳು ಮಾಡುತ್ತಿರುವ ಕೆಲವು ದೊಡ್ಡ ಉದ್ದಿಮೆದಾರರ ಸಾಲ ಮನ್ನಾ ಮಾಡಿದ್ದಾರೆ, ಆದರೆ ದೇಶದ ಬೆನ್ನೆಲು ಬಾಗಿ ದುಡಿಯುತ್ತಿರುವ ರೈತರ ಸಾಲ ಮನ್ನಾ ಮಾಡದೇ ಒಂದು ಕಣ್ಣಿಗೆ ಸುಣ್ಣ ಇನೊಂದು ಕಣ್ಣಿಗೆ ಬೆಣ್ಣೆ ಎಂತಾಗಿದೆ.ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಂಬಲ ಬೆಲೆ ನೀಡದೆ ರೈತರ ಅರ್ಥಿಕತೆಗೆ ದಕ್ಕೆಯನ್ನುಂಟು ಮಾಡಿದ್ದಾರೆ, ರೈತರು ಉಪಯೋಗಿಸುವಂತಹ ಉಪಕರಣಗಳ ಬೆಲೆ ಮತ್ತು ರಸಗೊಬ್ಬರಗಳ ಬೆಲೆ ಗಗನಕ್ಕೆರಿದೆ.ಪ್ರಧಾನ ಮಂತ್ರಿಗಳು ಹಾಗೂ ರಾಜ್ಯದ ರಸಗೊಬ್ಬರ ಮಂತ್ರಿಗಳು ಇದರ ಬಗ್ಗೆ ಸ್ವಲ್ಪವೂ ಗಮನ ಹರಿಸುತ್ತಿಲ್ಲ.ಪ್ರಕೃತಿ ವಿಕೋಪದಿಂದ ಹಾಳಾದ ರೈತರ ಬೆಳೆಗೆ ಪರಿಹಾರ ಘೋಷಣೆ ಮಾಡಿ ಇನ್ನುವರೆಗೆ ರೈತರ ಖಾತೆಗೆ ಪರಿಹಾರ ಜಮಾ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಕೋವಿಡ್-19 ಹೆಲ್ಪ್ ಡೆಸ್ಕ್‍ಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಭೇಟಿ

ಕೆಲವೇ ದಿನಗಳಲ್ಲಿ(ಜೂನ್)ಬಿತ್ತನೆಯ ಕಾರ್ಯ ಶುರುವಾಗುವುದರಿಂದ ರಾಜ್ಯದ ರೈತರಿಗೆ ಬಿತ್ತನೆಯ ಬೀಜ ಉಪಕರಣಗಳು ಮತ್ತು ರಸಗೊಬ್ಬರದ ಕೊರತೆಯಾಗದಂತೆ ಮುಖ್ಯ ಮಂತ್ರಿಗಳು ನೋಡಿಕೊಳ್ಳಬೇಕು ಹಾಗೂ ರೈತರ ಬಗ್ಗೆ ಕಾಳಜಿ ಸರ್ಕಾರಕ್ಕೆ ಇದ್ದರೆ ರೈತರು ಉಪಯೋಗಿಸುತ್ತಿರುವ ರಸಗೊಬ್ಬರಕ್ಕೆ 50% ರಿಯಾಯಿತಿ ಕೊಡಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.

ಕರೋನಾ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳುವ ಸಮಯದಲ್ಲೇ ರಾಜ್ಯದ ರೈತರ ಚಟುವಟಿಕೆಯಲ್ಲಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ತೊಂದರೆಯಾದರೆ ದೇಶದ ಆರ್ಥಿಕತೆ ತೊಂದರೆಯಲ್ಲಿ ಸಿಲುಕುತದೆ ಇದನ್ನು ಅರಿತು ರೈತರ ಮತ್ತು ಕೃಷಿ ಕಾರ್ಮಿಕರ ಹಿತ ಕಾಪಾಡಬೇಕು ಎಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ವಿನಂತಿಸಿಕೊಳ್ಳುತ್ತೆನೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here