ಶಹಾಬಾದ: ಕನ್ನಡ ರಂಗ ಭೂಮಿಯ ಹಿರಿಯ ನಾಟಕಕಾರ ಎಲ್.ಬಿ.ಕೆ ಆಲ್ದಾಳ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದ ಸಂಶೋಧಕ, ಬರಹಗಾರ ವೆಂಕಟಸುಬ್ಬಯ್ಯ ಅವರು, ಈ ನಾಡು ಕಂಡ ಅಪ್ರತಿಮ ವಿದ್ವಾಂಸರು ಎಂದು ಸುರೇಶ ಮೆಂಗನ ಹೇಳಿದರು.
ಅವರು ಮಂಗಳವಾರ ಭಂಕೂರಿನ ಬಸವ ಸಮಿತಿಯಲ್ಲಿ ಕಸಾಪ ಭಂಕೂರ ಘಟಕದ ವತಿಯಿಂದ ಆಯೋಜಿಸಲಾದ ಕನ್ನಡ ವಿದ್ವಾಂಸ ವೆಂಕಟಸುಬ್ಬಯ್ಯ ಮತ್ತು ರಂಗಕರ್ಮಿ ಎಲ್.ಬಿ.ಕೆ ಆಲ್ದಾಳ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಕರ್ಮಿ ಎಲ್.ಬಿ.ಕೆ ಆಲ್ದಾಳ ಇಸ್ಲಾಂ ಧರ್ಮದವರಾದರೂ ಲಿಂಗಾಯತ ಪರಂಪರೆಯ ಆಚರಣೆಯಲ್ಲಿ ತೊಡಗಿಸಿಕೊಂಡು, ಶರಣರ ನಾಟಕಗಳನ್ನೇ ಹೆಚ್ಚು ಬರೆದುಕೊಟ್ಟಿದ್ದಾರೆ.ನಾಟಕಗಳ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ತಮ್ಮ ಅಮೋಘ ಸೇವೆ ಸಲ್ಲಿಸಿರುವುದು ಅವೀಸ್ಮರಣಿಯವಾದುದು ಎಂದು ಹೇಳಿದರು.
ಯಾದಗಿರಿ: ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಐವರು ಸಾವು
ಕಸಾಪ ಭಂಕೂರ ಘಟಕದ ಅಧ್ಯಕ್ಷ ಪ್ರಧಾನಪ್ಪ ಕೊಕಟನೂರ್ ಮಾತನಾಡಿ, ಆಲ್ದಾಳ ಅವರು ಅನೇಕ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ರಂಗಭೂಮಿಯಲ್ಲಿ ಅಪಾರವಾದ ಸಾಧನೆ ಮಾಡಿದರೂ ಕಿಂಚಿತ್ತು ಹಮ್ಮು ಬಿಮ್ಮುಗಳಿರದ ಸರಳ ಸಾಧಾರಣ ವ್ಯಕ್ತಿಯಾಗಿದ್ದರು. ಎಲ್ಲರೊಂದಿಗೆ ಬೆರೆಯುವ ಭಾವೈಕ್ಯತೆಯ ನಿಧಿ ಆಲ್ದಾಳ ಅವರನ್ನು ಕಳೆದುಕೊಂಡ ರಂಗಭೂಮಿ ಕ್ಷೇತ್ರ ಮತ್ತು ಸಾಹಿತ್ಯ ಲೋಕ ನಿಜಕ್ಕೂ ಬಡವಾಗಿದೆ ಎಂದರು.
ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ವೆಂಕಟಸುಬ್ಬಯ್ಯ ಕನ್ನಡ ಶಬ್ದಕೋಶದ ಮೇಲೆ ಅವರಿಗಿದ್ದ ಅಸಾಧಾರಣ ಪಾಂಡಿತ್ಯದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿದ್ದರು. ದೇಶದ ಅತ್ಯನ್ನತ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದ ಜೀವಿಯವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾದಂತಾಗಿದೆ ಎಂದು ಹೇಳಿದರು.
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಕೊಲೆ
ಕಸಾಪ ತಾಲೂಕಾಧ್ಯಕ್ಷ ಮೃತ್ಯುಂಜಯ್ ಹಿರೇಮಠ ಮಾತನಾಡಿ, ಭಾ? ಮೇಲಿನ ಇವರ ಪಾಂಡಿತ್ಯಕ್ಕೆ ವೆಂಕಟಸುಬ್ಬಯ್ಯನವರಿಗೆ ನಡೆದಾಡುವ ನಿಘಂಟು, ಶಬ್ಧ ಬ್ರಹ್ಮ ಎಂಬ ಬಿರುದುಗಳು ಬಂದಿವೆ. ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳಲ್ಲಿ ಇವರ ಸೇವೆ ಅಪಾರ. ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ವಿಶೇ? ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಗರಿಗಳು ಇವರ ಮುಡಿ ಸೇರಿವೆ ಎಂದರು.
ಗ್ರಾಪಂ ಉಪಾಧ್ಯಕ್ಷ ಯಶ್ವಂತ ಚವ್ಹಾಣ, ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ,ಕಸಾಪ ಮಾಜಿ ಅಧ್ಯಕ್ಷ ನಾಗಣ್ಣ ರಾಂಪೂರೆ, ನಾಗರಾಜ ಸಿಂಘೆ, ಮುನ್ನಾ ಪಟೇಲ್, ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ್,ನೀಲಕಂಠ ಮುದೋಳಕರ್, ಮಲ್ಲಿಕಾರ್ಜುನ ಘಾಲಿ,ವೀಣಾ ಯಲಗೋಡಕರ್ ಇತರರು ಇದ್ದರು.