ಜೂನ್ 27 ರಂದು ಕಲಬುರಗಿಯಲ್ಲಿ ಉದ್ಯೋಗ ಮೇಳ

0
75

ಕಲಬುರಗಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಇದೇ ಜೂನ್ 27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಉದ್ಯೋಗ ವಿನಿಮಯ ಕಚೇರಿಯಲ್ಲಿ ಎಂಪ್ಲಾಯೇಬಿಲಿಟಿ ಸ್ಕಿಲ್ ಟ್ರೇನಿಂಗ್ ಮತ್ತು ಉದ್ಯೋಗ ಮೇಳ ಹಮ್ಮಿಕೊಳ್ಳಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಭಾಗವಹಿಸುವ ಕಂಪನಿಗಳು: ಕಲಬುರಗಿಯ ಟೆಲಿ ಕ್ರೋಮ್ ಸರ್ವಿಸಸ್ ಕಂಪನಿಯ ಟೆಲಿ ಕಾಲರ್ ಸುಪ್ರವಾಯಸರ್ ಟೀಮ್ ಲೀಡರ್ (ಹೆಚ್.ಆರ್) 20 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸಲಿದೆ. ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದ್ದು, ಪಿ.ಯು.ಸಿ ಡಿಪ್ಲೋಮಾ ಹಾಗೂ ಯಾವುದೇ ಪದವಿ ಹೊಂದಿರುವ 18 ರಿಂದ 24 ವಯೋಮಿತಿ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

Contact Your\'s Advertisement; 9902492681

ಬೆಂಗಳೂರಿನ ಕ್ಯಾಪಜೆಮಿನಿ ಲೀಪ್ ಡಿಜಿಟಲ್ ಅಕಾಡೆಮಿ ಕಂಪನಿಯಿಂದ ಡಾಟಾ ಅನಾಲಿಸ್ಟ್, ಸಾಫ್ಟವೇರ್ ಟೆಸ್ಟರ್, ಟಿಪಿಓ 150 ಹುದ್ದೆಗಳಿಗೆ ಬಿ.ಇ., ಬಿ.ಟೆಕ್, ಬಿ.ಕಾಂ, ಎಂ,ಕಾಂ, ಎಂ.ಸಿ.ಎ, ಬಿ.ಸಿ.ಎ ತೇರ್ಗಡೆಯಾದ 20 ರಿಂದ 25ವಯೋಮಿತಿ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

ಸಿಕಂದರಾಬಾದ್‌ನ ಬ್ಲಾಕ್ ಬೆಲ್ಟ್ ಕಮಾಂಡೋಸ್ ಸೆಕ್ಯೂರಿಟಿ ಸಿಸ್ಟಮ್. ಪೈ.ಲಿ ಕಂಪನಿಯು ಸೆಕ್ಯೂರಿಟಿ ಗಾರ್ರ‍್ಡ್ ಮತ್ತು ಸುಪ್ರವಾಯಸರ್ 20 ಹುದ್ದೆಗಳಿಗೆ 40 ವರ್ಷದ ಒಳಗಿನ ವಯೋಮಾನದವರು ಭಾಗವಹಿಸಬಹುದಾಗಿದ್ದು, ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು.

ಬೆಂಗಳೂರಿನ ಉಬರ್ ಇಂಡಿಯಾ ಸಿಸ್ಟಮ್ ಪ್ರೈ.ಲಿ. ಕಂಪನಿಯಲ್ಲಿ 500 ಕ್ಯಾಬ್ ಡ್ರೈವರ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಮೇಲ್ಪಟ್ಟ ವಿದ್ಯಾರ್ಹತೆಯ 18 ರಿಂದ35 ವಯೋಮಿತಿದವರು ಭಾಗವಹಿಸಬಹುದು.
ಕೋಲಾರ ಜೆ.ಬಿ.ಎಂ. ಕಂಪನಿಯಲ್ಲಿನ 300 ಆಪರೇಟರ್ ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ 18 ರಿಂದ 25 ಒಳಗಿನ ವಯೋಮಿತಿ ಹೊಂದಿರಬೇಕು.

ಕಲಬುರಗಿಯ ಜೊಮಾಟೋ ಕಂಪನಿಯಲ್ಲಿ ಇರುವ ಡೆಲಿವರಿ ಎಕ್ಸಕ್ಯೂಟಿವ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ ಪಾಸ್ ಆಗಿರಬೇಕು ಮತ್ತು 40 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಬೆಂಗಳೂರಿನ ಏಜಿಸ್ ಎನ್.ಎಸ್. ಇನ್ಫೋಟೆಕ್ ಕಂಪನಿಯಲ್ಲಿ ಕಸ್ಟಮರ್ ಎಕ್ಸಿಕ್ಯೂಟಿವ್ 100 ಹುದ್ದೆಗಳಿಗೆ ಪಿ.ಯು.ಸಿ. ಅಥವಾ ಯಾವುದೇ ಪದವಿ ಉತ್ತೀರ್ಣರಾಗಿರುವ ಹಾಗೂ 18 ರಿಂದ 27 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.

ಕಲಬುರಗಿಯ ಎ.ಪಿ.ಡಿ ಕಂಪನಿಯಲ್ಲಿ ಇರುವ ಹಾರ್ಟಿಕಲ್ಚರ್, ಹಾಸ್ಪಿಟಾಲಿಟಿ ಮತ್ತು ರೀಟೆಲ್ ಹದ್ದೆಗಳಿಗೆ ಎಸ್.ಎಸ್.ಎಲ್.ಸಿ ಪಾಸ್ ಅಥವಾ ಫೇಲ್, ಪಿ.ಯು.ಸಿ ಹಾಗೂ ಯಾವುದೇ ಪದವಿ (ಕೇವಲ ಅಂಗವಿಕಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು) ಉತ್ತೀರ್ಣರಾಗಿರುವ ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ಬೆಂಗಳೂರಿನ ನಡ್ಜ್ ಫೌಂಡೆಷನ್ ಸಂಸ್ತೆಯಲ್ಲಿನ ರಿಟೇಲ್ ಹುದ್ದೆಗಳಿಗೆ ೮ನೇ ತರಗತಿಯಿಂದ ಮೇಲ್ಪಟ್ಟ ಉತ್ತೀರ್ಣರಾದ 18 ರಿಂದ 30 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here