ಚಿತ್ತಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕರೋನಾ ನಿಯಂತ್ರಣ ತರಲು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದೆ ಎಂದು ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ದೀಪಕ್ ಹೊಸ್ಸುರಕರ್ ತಿಳಿಸಿದ್ದಾರೆ.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು ಇಡೀ ವಿಶ್ವದಲ್ಲಿಯೇ ಕರೋನಾ ಮಾಹಾಮಾರಿ ಹರಡಿ ಹಲವು ದೇಶಗಳನ್ನು ದಿವಾಲಿಯನ್ನಾಗಿ ಮಾಡಿದೆ.ಅದರಲ್ಲಿ ಭಾರತ ದೇಶದಲ್ಲಿಯೂ ಕೂಡ ಕರೋನಾ ಮಾಹಾಮಾರಿ ಹರಡಿದ್ದರಿಂದ ದೇಶ ದಿವಾಳಿ ಅಂಚಿನತ್ತ ಹೋಗಬಾರದು ಎನ್ನುವ ಒಂದೇ ಒಂದು ಉದ್ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೋನಾ ತಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದ್ದರು.
ಶಹಾಬಾದ: ವ್ಯಾಕ್ಸಿನ್ ಪಡೆಯಲು ಜನರಲ್ಲಿ ಹೆಚ್ಚಿದ ಆಸಕ್ತಿ
ಕರೋನಾ ಮಾಹಾಮಾರಿ ತಡೆಗಟ್ಟುವ ಪ್ರಯತ್ನ ಪ್ರತಿಯೊಬ್ಬರು ಮಾಡಬೇಕಿದೆ,ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ.ಈ ಮಹಾಮಾರಿ ರೋಗವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ,ಸ್ಯಾನಿಟೇಜ್ ಬಳಕೆ,ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಅಂದಾಗ ಮಾತ್ರ ಕರೋನಾ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ರಾಜ್ಯ ಸರ್ಕಾರ ಮೊದಲನೇಯ ಕರೋನಾ ಲಾಕ್ ಡೌನ್ ನಿಂದಾಗಿ ಜನರು ಹಲವು ರೀತಿಯ ತೊಂದರೆ ಅನುಭವಿಸುತ್ತಿದ್ದರು,ಇದೀಗ ಎರಡನೇ ಅಲೆ ಶುರುವಾಗಿದೆ ಹೀಗಾಗಿ ಕಳೆದ ಭಾರಿ ಅನುಭವಿಸಿದ ತೊಂದರೆ ಮತ್ತೆ ಅನುಭವಿಸಬಾರದು ಎಂಬ ಏಕೈಕ ಕಾರಣದಿಂದಾಗಿ ಬೆಳಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಸಮಯ ನಿಗದಿ ಪಡಿಸಿ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ: ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಳ್ಳಿ: ಸಂಸದ
ಕರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಕೂಡಲೇ ಸಂಪೂರ್ಣ ಬಂದ್ ಮಾಡಲು ಆದೇಶಿಸಿದೆ ಆದ್ದರಿಂದ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಕರೋನಾ ತಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದ್ದರು.