ಕಲಬುರಗಿ: ಶ್ರೀ. ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಟಾನ ವತಿಯಿಂದ ವಿಭೂತಿ ಯವರ ಅಕಾಲಿಕ ನಿಧನ ಹೊಂದಿದ ಕಾರಣ, ಕಲ್ಯಾಣ ಕರ್ನಾಟಕ ನೇಕಾರ ಮಹಾಸಭಾ ಮತ್ತು ಶ್ರೀ. ರಾ. ಚೌಡೇಶ್ವರಿ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆ ಜರುಗಿತು.
ಸಮಾಜದ ಹಿರಿಯರು ಹಾಗೂ ಲೇಖಕರಾದ ಸೂರ್ಯಕಾಂತ ಸೊನ್ನದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆಯಲ್ಲಿ ಕ.ಕ. ನೇಕಾರ ಮಹಾಸಭಾದ ಸಂಚಾಲಕ ಹಾಗೂ ರಾಜ್ಯ ಹಟಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಜೇನವೆರಿ ವಿನೋದ ಕುಮಾರ ಮಾತನಾಡಿ, 2015 ರಲ್ಲಿ ದಿವಂಗತರು ಸಮಾಜದ ಮಾಜಿ ಅಧ್ಯಕ್ಷರಾಗಿದರು ಎಂದು ಸಭೆಯಲ್ಲಿ ತಿಳಿಸಿದರು.
ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಹಿಂದೇಟು: ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು
ನಂತರ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೂರ್ಯಕಾಂತ ಸೊನ್ನದ ಅವರು ಮಾತನಾಡಿ ಸಮಾಜದ ಅನರ್ಘ್ಯ ರತ್ನ ಕಳೆದುಕೊಂಡು ಅನಾಥ ಪ್ರಜ್ಞೆ ಕಾಡುತ್ತಿದೆ ಎಂದರು. ಸಮಾಜ ಮತ್ತು ರಾಜಕೀಯ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕಾಗಿತ್ತು. ಬಡ ಹಟಗಾರ ನೇಕಾರ ಕುಟುಂಬದಲ್ಲಿ 1940 ರಲ್ಲಿ ಜನಿಸಿ , 1964 ರಲ್ಲಿ msc ಹಾಗೂ ma ಸ್ನಾತಕೋತ್ತರ ಪದವಿ ಪಡೆದ ಇವರು ಸರ್ಕಾರ ಸೇವೆಗೆ ಸೇರದೆ ತಂದೆಯ ಮಾತಿನಂತೆ ಕೃಷಿಯಲ್ಲಿ ತೊಡಗಿದರು, 1965 ರಲ್ಲಿ ಪ್ರಕಾಶನ ಕಾರ್ಯ ದಲ್ಲಿ ತೊಡಗಿ ಬಂಧು ಎಂಬ ವಾರ್ಷಿಕ ಪತ್ರಿಕೆ ಪ್ರಾರಂಭಿಸಿದರು.
ನಂತರ ಅದನ್ನು ಮಾಸಿಕ ಪತ್ರಿಕೆ ಮಾಡಿ 3 ದಶಕಗಳ ಸೇವೆ ಸಲ್ಲಿಸಿದ್ದಾರೆ ಅಲ್ಲದೆ ಕಳೆದ 3 ದಶಕಗಳಿಂದ ಕೃಷಿಯಲ್ಲಿ ದುಡಿಯುತ್ತಾ, ಒಂದು ವಿಶೇಷ ತಳಿ ಕೋಲ್ಕೊತಾ ಪರೇಳ ಹಣ್ಣು ಬೆಳೆದು ಅದರ ಎಲೆ ಗಳಿಂದ ಚಾಹ ಪುಡಿ ತಯಾರಿಸಿ ಅದಕ್ಕೆ ವೈಶಾಲಿ ಎಂದು ಹೆಸರು ಇಟ್ಟು ಮಾರುಕಟ್ಟೆಯಲ್ಲಿ ಬಿಡುಗಡೆ ಗೊಳ್ಳಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಸಾವಯುವ ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡರು, ಕುರಿ , ಕೋಳಿ ಸಾಕಾಣಿಕೆ ಮಾಡಿ ಹೆಸರುವಾಸಿ ಯಾಗಿದ್ದರು, ಇತ್ತಿಚೆಗೆ ಇವರ ಕಾರ್ಯ ಗುರುತಿಸಿ ಬಾಗಲಕೋಟ ತೋಟಗಾರಿಕೆ ವಿಶ್ವ ವಿದ್ಯಾಲಯ ಇವರನ್ನು ರೈತ ರತ್ನ ಎಂಭ ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ ಕನ್ನಡ ಪ್ರಭ ಮತ್ತು ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಾನೆಲ್ ಇವರನ್ನು ಶ್ರೇಷ್ಠ ರೈತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ತಿಳಿಸಿದರು.
ವೈರಸ್ ನಿರ್ಮೂಲನೆಗಾಗಿ ವಿವಿಧ ವಾರ್ಡ್‌ಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ
ಈ ಸಂದರ್ಭದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಸಭೆಯಲ್ಲಿ ಬಿಜೆಪಿಯ ನೇಕಾರ ಪ್ರಕೋಷ್ಠದ ಮಹಾನಗರದ ಸಂಚಾಲಕರಾದ ಶಿವಲಿಂಗಪ್ಪಾ ಅಷ್ಟಗಿ, ಗ್ರಾಮೀಣ ಸಂಚಾಲಕರಾದ ಗುರುನಾಥ ಸೊನ್ನದ ಹಾಗೂ ಸಮಾಜದ ಹಿರಿಯರು ನೇಕಾರ ಕಾರ್ಯಕರ್ತರು ಉಪಸ್ಥಿತರಿದ್ದರು.