ಕಾಯಕದಿಂದಲೇ ರಾಷ್ಟ್ರದ ಸಮ್ಮೃದ್ಧಿ: ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ

0
25

ಕಲಬುರಗಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಕಾಯಕ ದಿನಾಚರಣೆ ಹಾಗೂ ಶರಣ ಮಡಿವಾಳ ಮಾಚಿ ದೇವರ ಜಯಂತಿಯನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕೋವಿಡ್ ಹನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿರುವ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರುತಮ್ಮ ಸಾನಿಧ್ಯ ನುಡಿಯಲ್ಲಿಕಾಯಕದ ಹಿರಿಮೆಯನ್ನು ತಿಳಿಸಿದರು. ಬಸವಾದಿ ಶರಣರುಕಾಯಕವೇ ಕೈಲಾಸ ಎಂದು ಸಾರಿದರು. ಬಸವಣ್ಣನವರ ಚಳುವಳಿ ನಿಜಾರ್ಥದಲ್ಲಿಕಾಯಕ ಜೀವಿಗಳ ಚಳುವಳಿಯಾಗಿತ್ತು ಬಸವಣ್ಣನವರ ನಾಯಕತ್ವದಲ್ಲಿ ಅಂದಿನ ದಿನಮಾನದಎಲ್ಲಕಾಯಕ ಜೀವಿಗಳನ್ನು ಅನುಭವ ಮಂಟಪದಲ್ಲಿ ಸೇರಿದರು. ಶರಣ ಮಡಿವಾಳ ಮಾಚಿದೇವರು ಬಟ್ಟೆಯನ್ನು ತೊಳೆಯುವ ಕಾಯಕ ಮಾಡುತ್ತಿದ್ದರು.

Contact Your\'s Advertisement; 9902492681

ಕುಂಬಾರಗುಂಡಯ್ಯಾನವರಕಾಯಕಕ್ಕೆ ಮೆಚ್ಚಿ ಶಿವನೇ ಪ್ರತ್ಯಕ್ಷನಾಗಿ ನಿನಗೆ ಕೈಲಾಸಕ್ಕೆ ಕರೆದೊಯ್ಯುವೆಎಂದರುಗುಂಡಯ್ಯಾ ನವರು ಬೇಡೆನಗೆ ಕೈಲಾಸ ಬಾಡಿತುಕಾಯಕಎಂದುಕಾಯಕ ನಿಷ್ಠೆಯನ್ನು ಮೆರೆದರು.  ತಮ್ಮತಮ್ಮಕಾಯಕವನ್ನೇ ಮಾಡುತ್ತ ಲಿಂಗಾಂಗ ಸಾಮರಸ್ಯದ ಸುಖವನ್ನು ಪಡೆದರು. ಜಗತ್ತಿನಲ್ಲಿಕಾಯಕತತ್ವವನ್ನೇಎತ್ತಿ ಹಿಡಿದಿರುವಧರ್ಮಅದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತಧರ್ಮವಾಗಿದೆ. ಬಸವಾದಿ ಶರಣರ ವಾರಸುದಾರರಾದ ನಾವು ಪ್ರತಿ ನಿತ್ಯ ಸತ್ಯ ಶುಧ್ಧಕಾಯಕವನ್ನು ಮಾಡಲೇಬೆಕುಕಾಯಕದಿಂದಲೇಕುಟುಂಬ ಸಮಾಜ ಹಾಗೂ ರಾಷ್ಟ್ರ ಸಮ್ಮೃಧವಾಗಲು ಸಾಧ್ಯವಿದೆ. ಎಂದು ಪರಮಪೂಜ್ಯರು ಆಶೀರ್ವಚನದಲ್ಲಿ ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ಶರಣ ಮಡಿವಾಳ ಮಾಚಿದೇವರಜೀವನಚರಿತ್ರೆಯ ಮೇಲೆ ಬೆಳಕು ಚೆಲ್ಲಿದರು. ಮಡಿವಾಳ ಮಾಚಿದೇವರುಗಣಾಚಾರಿ ಶರಣರು. ವಚನ ಸಾಹಿತ್ಯರಕ್ಷಣೆಯಲ್ಲಿ ಮಾಚಿದೇವರ ಪಾತ್ರತುಂಬ ಮಹತ್ವದಿದೆ. ಅವರುತಮ್ಮ ಪ್ರಾಣವನ್ನೇ ಬದೆಗಿಟ್ಟು ವಚನಸಾಹಿತ್ಯರಕ್ಷಣೆಗಾಗಿ ಹೋರಾಡಿದರು. ಅವರ ಸಂಘರ್ಷ ಹಾಗೂ ತ್ಯಾಗದಿಂದಲೇಇಂದು ನಮಗೆ ವಚನ ಸಾಹಿತ್ಯವುದೊರೆಯುತ್ತಿದೆ. ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ವಿಶ್ವಗುರು ಬಸವಣ್ಣನವರ ಹಾಗೂ ಶರಣ ಮಡಿವಾಳ ಮಾಚಿದೇವರುಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ರಾಮಚಂದ್ರ ಯರನಾಳೆ ವಚನಗಾಯನ ಮಾಡಿದರು. ಬಾಬು ಬೆಲ್ದಾಳ ನಿರುಪಿಸಿದರು. ಶರಣರಾಜುಜುಬರೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here