ಆಕ್ರಮ ರೆಮ್ಡೇಸಿವಿರ್ ಎಂಜೆಕ್ಷನ್ ಮಾರಾಟ: ಇಬ್ಬರು ಆರೋಪಿಗಳು ಅರೆಸ್ಟ್

0
107

ಕಲಬುರಗಿ: ನಗರದ ಶಹಾಬಾದ್ ರಿಂಗ್ ರೋಡ್ ಹತ್ತಿರ ರೆಮ್ಡೇಸಿವಿರ್ ಎಂಜೆಕ್ಷನ್ ಕಾಳ ಸಂತೆಯಲ್ಲಿ ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಂದ ಇಪತ್ತು ಸಾವಿರ ಬೆಲೆ ಬಾಳುವ 5 ರೆಮ್ಡೇಸಿವಿರ್ ಎಂಜೆಕ್ಷನ್  ವಶಪಡಿಸಿಕೊಂಡಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ನಗರದ ಸಂತೋಷ ಕಾಲೋನಿಯ ನಿವಾಸಿ ಮಹಾಂತೇಶ್ ಬಸಯ್ಯ ಮಠಪತಿ (26) ಹಾಗೂ ಸಣ್ಣೂರು ಗ್ರಾಮದ ನಿವಾಸಿ ಸಾಜಿದ್ ಇಮಾಮ್ ಸಾಬ್ ಕೂಡಿ (22) ಬಂಧಿತ ಆರೋಪಿಗಳು.

Contact Your\'s Advertisement; 9902492681

ಇಬ್ಬರು ನವಜೀವನ ಬ್ಲಡ್ ಬ್ಯಾಂಕ್ ನಲ್ಲಿ ಕಾರ್ಯಾನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಶಹಾಬಾದ್ ರಿಂಗ್ ರೋಡ್ ಹತ್ತಿರ ಯಾವುದೇ ಪರವಾನಗಿ ಇಲ್ಲದೇ 4 ಸಾವಿರ ಒಂದು ಎಂಜೆಕ್ಷನ್ ನನ್ನು ಒಂದು ಚುಚ್ಚುಮದನ್ನು 22 ಸಾವಿರಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ ಖಚಿತ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಪ ಪೊಲೀಸ್ ಆಯುಕ್ತರಾದ ಐಪಿಎಸ್ ಅಂಶ್ಯುಕುಮಾರ ಮಾರ್ಗದರ್ಶನದ ಜಿಲ್ಲಾ ರೌಡಿ ನಿಗ್ರಹದಳ ಪಿಎಸ್ಐ ವಾಹೇದ್ ಹುಸೇನ್ ಕೋತ್ವಾಲ್, ಸಿಬ್ಬಂದಿಗಳಾದ ಎಎಸ್ಐ ಹುಸೇನ್ ಬಾಷಾ, ತೌಷಿಫ್, ರಾಜು ಹಾಗೂ ಈರಣ್ಣಾ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳಿಂದ 5 ಇಂಜೇಕ್ಸ್ ನ ಹಾಗೂ ಒಂದು ದ್ವಿ ಚಕ್ರ ವಾಹನ ಮತ್ತು ಎರಡು ಮೊಬೈಲ್ ಗಳು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here