ಕಲಬುರಗಿ: ಗುಲಬರ್ಗಾ ಬಾರ್ ಅಸೋಸಿಯೇಷನ್ ಕಲಬುರಗಿ ವತಿಯಿಂದ ಚುನಾಯಿತರಾದ ಹೊಸ ಪದಾಧಿಕಾರಿಗಳ ಚಾರ್ಚ್ ತೆಗೆದುಕೊಳ್ಳುವ ಕಾರ್ಯಕ್ರಮವನ್ನು ಅತಿ ಸರಳವಾಗಿ ಸಂಕ್ಷೀಪ್ತವಾಗಿ ಚಾರ್ಚ್ ತೆಗೆದುಕೊಳ್ಳಲಾಯಿತು.
ನೂತನ ಅಧ್ಯಕ್ಷರಾದ ರಾಜಕುಮಾರ ಎಸ್.ಕಡಗಂಚಿ, ಉಪಾಧ್ಯಕ್ಷ ಫತ್ರುಬಿ ಎ. ಖಾಸಿಂಶಾ, ಪ್ರಧಾನ ಕಾರ್ಯದರ್ಶಿ ಪಿ.ಎನ್.ಕಪನೂರ, ಖಚಾಂಚಿ ವಿಶ್ವರಾಧ್ಯ ಕೆ. ಇಜೇರಿ, ಜಂಟಿ ಕಾರ್ಯದರ್ಶಿ ದೇವನಾಥ ಎಸ್.ಮಾಳಗಿ ಇವರುಗಳನ್ನು ಸುರೇಶ ಟೆಂಗಳಿ ವಕೀಲರ ಗ್ರೂಪ್ ಹಾಗೂ ಹರಿ ಓಂ ಲಾ ಅಸೋಸಿಯೇಟ್ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚುನಾಯಿತ ಸದಸ್ಯರುಗಳು ಹಾಗೂ ಕ.ವ.ನ್ಯಾ ಕಾರ್ಯಕಾರಣಿ ಮಂಡಳಿಯ ಸದಸ್ಯರುಗಳಾದ ಸಂತೋಷ ಪಾಟೀಲ್, ದುಧನಿ, ಎಸ್.ಆರ್.ಪೋಲಿಸ್ ಪಾಟೀಲ್, ವಕೀಲರು, ಸುರೇಶ ಟೆಂಗಳಿ, ಸಚೀನ್ ಮಣ್ಣೂರೆ, ಚಂದ್ರಕಾಂತ ಕಾಳಗಿ, ರಾಜು ಸ್ವಾಮಿ, ರಾಜು ಹುಲ್ಲೂರ, ಸಿದ್ದಲಿಂಗ ಪಾಟೀಲ್, ಭೀಮಾಶಂಕರ ಹಾಗೂ ವಕೀಲ ಬಾಂಧವರು ಹಾಜರಿದ್ದರು.