ಗ್ರಾಮ ವಿದ್ಯುತ್ ಪ್ರತಿನಿಧಿಗಳ ಆಗ್ರಹ

0
578

ಶಹಾಬಾದ: ಕರೋನಾ ಮಹಾಮಾರಿ ರೋಗ ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗುತ್ತಿರುವುದರಿಂದ ಮೀಟರ್ ರೀಡಿಂಗ್ ಮತ್ತು ಕಂದಾಯ ವಸೂಲಾತಿಯಲ್ಲಿ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಸೋಮವಾರ ಜೆಸ್ಕಾಂನ ಗ್ರಾಮ-ವಿದ್ಯುತ್-ಪ್ರತಿನಿಧಿಗಳು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ-ವಿದ್ಯುತ್-ಪ್ರತಿನಿಧಿಗಳು, ನಾವುಗಳು ಕಂಪನಿಯಲ್ಲಿ ಸುಮಾರು ಹದಿನೇಳು ವ?ಗಳಿಂದ ಯಾವುದೇ ಸೇವಾಭದ್ರತೆ ಕನಿ? ಸೌಲಭ್ಯ ಇಲ್ಲದೆ ಕನಿ? ವೇತನಕ್ಕೆ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ.ಆದರೆ ಈಗ ಮಹಾಮಾರಿ ಕರೋನಾ ರೋಗವು ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಿರುತ್ತದೆ ನಾವು ಮಾಡುವ ಕೆಲಸವು ಸಾರ್ವಜನಿಕರ ನೇರ ಸಂಪರ್ಕದಲ್ಲಿ ಮಾಡುವ ಕೆಲಸವಾಗಿರುತ್ತದೆ. ಕಾರಣ ಇಂತಹ ಸಂದರ್ಭದಲ್ಲಿ ಮನೆಮನೆಗೆ ತೆರಳಿ ವಿದ್ಯುತ್ ಬಿಲ್ ವಿತರಣೆ ಮತ್ತು ಕಂದಾಯ ವಸೂಲಿ ಮಾಡಲು ನಮಗೆ ತುಂಬಾ ಭಯವಾಗುತ್ತಿದೆ.

Contact Your\'s Advertisement; 9902492681

ಬಡ ರೋಗಿಗಳಿಗೆ ಯುವಕರಿಂದ ಹಣ್ಣು-ಹಂಪಲು,ಊಟದ ವ್ಯವಸ್ಥೆ

ಏಕೆಂದರೆ ಈ ಕೊರೊನಾ ಸೋಂಕು ಯಾರಿಗೆ ಇದೆಯೋ ಯಾರಿಗಿಲ್ಲ ಎಂಬುದು ಗೊತ್ತಾಗುವುದಿಲ್ಲ. ಕಾರಣ ನಮಗೂ ಕೂಡಾ ನಮ್ಮನ್ನು ನಂಬಿರುವ ಕುಟುಂಬಗಳು ಇರುವುದರಿಂದ ಇಂತಹ ಸಂದರ್ಭದಲ್ಲಿ ಕೆಲಸ ಮಾಡಲು ಹೋದಾಗ ಅಕಸ್ಮಾತಾಗಿ ನಮಗೆ ಸೋಂಕು ತಗಲುವ ಭೀತಿ ಉಂಟಾಗಿರುತ್ತದೆ. ಈ ಸೋಂಕು ತಗಲಿ ನಾವುಗಳು ಮೃತರಾದರೆ ನಮ್ಮ ಕುಟುಂಬಗಳು ಬೀದಿ ಪಾಲಾಗುವ ಸಂಭವವಿರುತ್ತದೆ. ಏಕೆಂದರೆ ಈಗಾಗಲೇ ಕಳೆದ ವ? ೨೦೨೦ ರಲ್ಲಿ ಕೆಲ ಗ್ರಾಮ-ವಿದ್ಯುತ್-ಪ್ರತಿನಿಧಿಗಳು ಕೊರೋನಾ ಸೋಂಕಿಗೆ ತುತ್ತಾಗಿರುತ್ತಾರೆ.

ಸೊಂಕಿನಿಂದ ತುತ್ತಾದ ಕುಟುಂಬಕ್ಕೆ ಕಂಪನಿಯಿಂದ ಯಾವುದೇ ಪರಿಹಾರವಾಗಲಿ ಅಥವಾ ಇನ್ನಿತರ ಯಾವುದೇ ಸೌಲಭ್ಯಗಳು ನೀಡಿರುವುದಿಲ್ಲ.ಅದೇ ಕಂಪನಿಯ ಕಾಯಂ ನೌಕರರಾದರೆ ಅವರಿಗೆ ಅನುಕಂಪದಲ್ಲಿ ಕುಟುಂಬದವರಿಗೆ ಉದ್ಯೋಗ ಮತ್ತು ಪರಿಹಾರ ಇನ್ನಿತರ ಸೌಲಭ್ಯಗಳನ್ನು ಕಂಪನಿ ನೀಡುತ್ತದೆ. ಆದರೆ ನಮಗೆ ಈ ರೀತಿಯ ಸೌಲಭ್ಯಗಳು ಇರುವುದಿಲ್ಲ. ಕನಿ? ಆರೋಗ್ಯ ಭದ್ರತೆ ಯಾಗಲಿ ಸೇವಾ ಭದ್ರತೆಯಾಗಲೀ ಇರುವುದಿಲ್ಲ.ಆದಕಾರಣ ತಾವುಗಳು ದಯವಿಟ್ಟು ಈ ಮಹಾಮಾರಿ ಕರೋನವೈರಸ್ ಸೋಂಕು ಹತೋಟಿಗೆ ಬರುವವರಿಗೆ ನಮಗೆ ಮೀಟರ್ ರೀಡಿಂಗ್ ಮತ್ತು ಕಂದಾಯ ವಸೂಲಾತಿಯಲ್ಲಿ ವಿನಾಯತಿ ನೀಡಬೇಕೆಂದು ಮನವಿ ಮಾಡಿಕೊಂಡರು.
ಗ್ರಾಮೀಣ ವಿದ್ಯುತ್ ಪ್ರತಿನಿಧಿ ಸಂಘದ ತಾಲೂಕಾಧ್ಯಕ್ಷ ವಸಂತಕುಮಾರ ಚೂರಿ, ಮರೆಪ್ಪ ಸನ್ನತ್ತಿ, ಪ್ರಕಾಶ, ದೇವೆಂದ್ರ, ಶಿವರಾಮಸಿಂಗ, ವಿಜಯಕುಮಾರ, ರಮೇಶ, ಸುನೀಲ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here