Monday, July 15, 2024
ಮನೆಬಿಸಿ ಬಿಸಿ ಸುದ್ದಿಬಡ ರೋಗಿಗಳಿಗೆ ಯುವಕರಿಂದ ಹಣ್ಣು-ಹಂಪಲು,ಊಟದ ವ್ಯವಸ್ಥೆ

ಬಡ ರೋಗಿಗಳಿಗೆ ಯುವಕರಿಂದ ಹಣ್ಣು-ಹಂಪಲು,ಊಟದ ವ್ಯವಸ್ಥೆ

ಶಹಾಬಾದ: ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಬಡ ರೋಗಿಗಳಿಗೆ ಹಣ್ಣು-ಹಂಪಲು, ಕುಡಿಯುವ ನೀರು ಹಾಗೂ ಊಟದ ಪೊಟ್ಟಣವನ್ನು ಉಪನ್ಯಾಸಕ ಮಹ್ಮದ್ ಇರ್ಫಾನ್ ಹಾಗೂ ಸಂಗಡಿಗರು ಆಹಾರದ ಪದಾರ್ಥಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹ್ಮದ್ ಅಬ್ದಲ್ ರಹೀಮ್, ಕೊರೊನಾ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸಗಳು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಬಡ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಒಂದು ಹೊತ್ತು ಊಟಕ್ಕೂ ಕೆಲವು ಜನರು ಸಂಕಷ್ಟ ಪಡುತ್ತಿದ್ದಾರೆ. ಇದರ ಮಧ್ಯೆ ಉಪನ್ಯಾಸಕ ಮಹ್ಮದ್ ಇರ್ಫಾನ್ ಸಂಗಡಿಗರು ನಿತ್ಯ ಬಂದು ಬಡ ರೋಗಿಗಳಿಗೆ ಊಟದ ವ್ಯವಸ್ಥೆ , ಕುಡಿಯುವ ನೀರಿನ ಬಾಟಲ್,ಹಣ್ಣು-ಹಂಪಲುಗಳನ್ನು ನೀಡುವ ಮೂಲಕ ಉದಾರ ಮನೋಭಾವ ತೋರುತ್ತಿದ್ದಾರೆ.ಇವರ ಮಾಡುವ ಸೇವೆಯಿಂದ ನಾವು ಕಲಿಯಬೇಕಾದ ಸಂದರ್ಭದ ಒದಗಿ ಬಂದಿದೆ.ನಾವು ಕರೊನಾ ಸಂದರ್ಭದಲ್ಲಿ ಕಡು ಬಡವರಿಗೆ ಸಹಾಯ ಮಾಡಲು ಮುಂದಾಗುತ್ತೆನೆ ಎಂದು ಹೇಳಿದರು.

ಉಪನ್ಯಾಸಕ ಮಹ್ಮದ್ ಇರ್ಫಾನ್ ಮಾತನಾಡಿ, ಲಾಕ್‌ಡೌನ್ ಆಗಿದ್ದಾಗಿನಿಂದಲೂ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಸಮಸ್ಯೆಯಾಗದಂತೆ ಸಂಗಡಿಗರು ಕೂಡಿಕೊಂಡು ಸಹಾಯ ಹಸ್ತ ಚಾಚಿದ್ದೆವೆ. ನಮ್ಮ ಜತೆಗೆ ನೀಡುವ ಕೈಗಳು ಮುಂದೆ ಬಂದರೆ ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ನಿರ್ಗತಿಕರಿಗೆ ಮತ್ತು ಕಡುಬಡವರ ಕುಟುಂಬಕ್ಕೆ ಮಾನವೀಯತೆಯಿಂದ ಆಹಾರವನ್ನು ಒದಗಿಸಿದರೆ ಅವರಲ್ಲೇ ನಾವು ದೇವರನ್ನು ಕಾಣಬಹುದು ಎಂದು ಹೇಳಿದರು.
ಗಿರಿರಾಜ ಪವಾರ, ಕವಿತಾ ಸಿದ್ದಲಿಂಗ ಡೆಂಗಿ, ಬೋಜು ಇತರರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular