ಕಲಬುರಗಿ: ಇತ್ತೀಚಿಗಷ್ಟೆ ನಗರದ ಜೇವರ್ಗಿ ರಸ್ತೆಯ ಹತ್ತಿರ 21 ರಂದು ರಾತ್ರಿ ಹಣದ ವ್ಯವಹಾರಕ್ಕಾಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬಜಾರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಂದ್ರಕಾಂತ ಭೀಮರಾಯ್ಯ ಕೊಲೆ ಮಾಡಿರು ಪ್ರಮುಖ ಆರೋಪಿ ಎಂದು ತಿಳಿದು ಬಂದಿದ್ದು, ಚಂದ್ರಕಾಂತ ಕೊಲೆ ಯಾದ ವಿನಯ ಇಂದ 50 ಸಾವಿರ ಹಣ ಪಡೆದಿದ. ಹಣ ವಾಪಸ್ ನೀಡುವುದಕಾಗಿ ವಿನಯ ಚಂದ್ರಕಾಂತಗೆ ಬೆನ್ನು ಬಿದಾಗ ಚಂದ್ರಕಾಂತ, ಮಲ್ಲಿಕಾರ್ಜುನ್ ಹಾಗೂ ಮಂಜುನಾಥ್ ಸೇರಿಕೊಂಡು ವಿನಯಗೆ ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ವಿನಯಗೆ ಮೂವರು ಆರೋಪಿಗಳು ಹರಿತವಾದ ಆಯುಧದಿಂದ ಹೋಡೆದು ಕೊಲೆ ಮಾಡಿದ್ದಾರೆಂದು ತನಿಖಾ ವರದಿಯ ಮೂಲಕ ಪೊಲೀಸರು ಬಹಿರಂಗ ಪಡಿಸಿದ್ದಾರೆ.
ಸ್ಟೇಷನ್ ಬಜಾರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿದ ಅಪರಾಧ ವಿಭಾಗದ ಪೊಲೀಸರಾದ ನಜಮೋದ್ದಿನ್ ಹೆಚ್.ಸಿ, ಮಲ್ಲನಗೌಡ, ಶಿವಾನಂದ, ಸಂತೋಷ, ಮಲ್ಲಿಕಾರ್ಜುನ್ ಮೇತ್ರೆ, ದೇವೇಂದ್ರ ಹೆಚ್.ಸಿ, ಸಂಜೀವ ಕುಮಾರ ಎಚ್.ಸಿ, ಸೇರಿದಂತೆ ಠಾಣಾ ಪೊಲೀಸ್ ನಿರೀಕ್ಷಕ ಘೋರ್ಪಡೆ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.