ಕೋಲಾರ ತಾಲೂಕಿನ ವೇಮಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಯಾನಿಟೇಸರ್ ಸಿಂಪಡಣೆ

0
16

ವೇಮಗಲ್: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಗ್ರಾಮದ ಪ್ರತಿ ಬೀದಿ ಬೀದಿಗಳಲ್ಲಿಯೂ ಸ್ಯಾನಿಟೇಸರ್ ಸಿಂಪಡಣೆಗೆ ಪಟ್ಟಣ ಪಂಚಾಯತಿ ನೋಡಲ್ ಅಧಿಕಾರಿ ಕಾಂತರಾಜು ಚಾಲನೆ‌ ನೀಡಿದರು.

ಗ್ರಾಮಗಳಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು, ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿಯೂ ಸ್ಯಾನಿಟೇಸರ್ ಸಿಂಪಡಣೆ ಮಾಡಲಾಗುವುದು.‌ ಇದಕ್ಕೆಲ್ಲ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ, ಕೊರೊನಾ 2 ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮಾಂತರ ಭಾಗದಲ್ಲಿ ಸೋಂಕು ಹೆಚ್ಚಾಗಿದೆ, ಇದರಿಂದ ರೈತಾಪಿ ವರ್ಗದ ಜನರು ಕರೋನ ಬಗ್ಗೆ ಭಯ ಭೀತರಾಗಬೇಡಿ,
ಬದಲಿಗೆ ಸರ್ಕಾರದ ನಿಯಮಗಳನ್ನು ಪಾಲಿಸಿ ಮನೆಯಲ್ಲಿಯೇ ಇದ್ದು ಸರ್ಕಾರದ ಜೊತೆ ಸಹಕರಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದರು.

Contact Your\'s Advertisement; 9902492681

ಗ್ರಾ.ಪಂ ಮಾಜಿ ಅಧ್ಯಕ್ಷ ಬಿ ನಾಗರಾಜ್‌ ಮಾತನಾಡಿ ಪಟ್ಟಣ ಪಂಚಾಯತಿ ಮಟ್ಟದಲ್ಲಿ ಪ್ರತಿ ಗ್ರಾಮದ ಮನೆ ಮನೆಗೂ ಸ್ಯಾನಿಟೇಜರ್ ಸಿಂಪಡಣೆ ಮಾಡಲಾಗುತ್ತದೆ. ಆದ್ದರಿಂದ ಸ್ಥಳೀಯರು ಪಂಚಾಯಿತಿ ಸಿಬ್ಬಂದಿಗೆ ಸಹಕಾರ ನೀಡಬೇಕು. ಮನೆಯಿಂದ ಹೊರ ಬಂದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಮರೆಯಬಾರದು, ಗ್ರಾಮೀಣ ಜನರು ನಗರಗಳಿಗೆ ವಿನಾಕಾರಣ ಹೋಗಿ ಬರುವುದನ್ನು ನಿಲ್ಲಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಪಪಂ ಜೂನಿಯರ್ ಇಂಜಿನಿಯರ್ ಶ್ರೀನಿವಾಸ್, ಸಿಬ್ಬಂದಿ ಧನಂಜಯ್ (ಬಾಬು) ರಾಜಣ್ಣ, ಶ್ರೀನಿವಾಸ್ ಚಾರಿ, ಸುದರ್ಶನ್, ಸುಲ್ತಾನ್ ಬೇಗ್, ನಾರಾಯಣಸ್ವಾಮಿ, ಮಂಜುನಾಥ್, ಮುನಿಸ್ವಾಮಿ ಶೆಟ್ಟಿ, ಶಾರದಮ್ಮ ನರಸಿಂಹಪ್ಪ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here