ಕೊರೋನಾ ಮಹಾಮಾರಿ ವಿರುದ್ಧ ಪೋಲಿಸ್‌ರ ಸೇವೆ ಅಪಾರ: ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಶ್ಲಾಘನೀಯ

0
110

ಆಳಂದ: ಕೊರೋನಾದಿಂದಾಗಿ ದೇಶವು ಇವತ್ತು ಸಂಪೂರ್ಣ ಲಾಕ್‌ಡೌನ್ ಆಗಿದ್ದು ಜನರು ಭಯಭೀತರಾಗಿದಾರೆ, ಹಲವಾರು ಸಾವು ನೋವುಗಳಿಂದ ಇಡೀ ದೇಶವೇ ಸ್ಥಬ್ಧವಾಗಿದೆ ಹೀಗಿರುವಾಗ ತಮ್ಮ ಜೀವನದ ಹಂಗನು ತೋರೆದು ಜನರ ಐಳಿಗೆಗಾಗಿ ಹಗಲು, ರಾತ್ರಿ ಎನ್ನದೆ ಕೊರೋನಾ ವಾರಿಯರ್ಸ್ ರೀತಿಯಲ್ಲಿ ಪೋಲಿಸರು ದುಡಿಯುತ್ತಿದಾರೆ, ನಿಜಕ್ಕೂ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಆಳಂದ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಹೇಳಿದರು.

ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ಪೋಲಿಸ್ ಸ್ಟೇ?ನ್ ಹೋರಾಗಣದಲ್ಲಿ ಮಾಡಿಯಾಳ ಗ್ರಾಮ ಪಂಚಾಯತಿ ವತಿಯಿಂದ ಪೋಲಿಸ್‌ರೀಗೆ ಸ್ಟ್ರೀಮರ್ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಕೊರೋನಾ ಮಹಾಮಾರಿಯಂತ ವೈರಸ್‌ನ ವಿರುದ್ಧ ಇವತ್ತು ವೈದ್ಯರು ಶ್ರಮವಹಿಸಿದ? ಪೋಲಿಸರ್ ಕೂಡ ಜನರಲ್ಲಿ ಜಾಗೃತಿ ಮೂಡಿಸಿ, ಗುಂಪು-ಗುಂಪಾಗಿ ಸೇರದ ರೀತಿಯಲ್ಲಿ ಅವರೀಗೆ ತಿಳುವಳಿಕೆ ನೀಡುವ ಮೂಲಕ ಕಾರ್ಯನಿರ್ವಹಿಸುತಿದಾರೆ ಎಂದು ಹೇಳಿದರು.

Contact Your\'s Advertisement; 9902492681

ಪೊಲೀಸ್ ಸಿಬ್ಬಂದಿಗಳಿಂದ ನಿರ್ಗತಿಕರಿಗೆ ಅನ್ನಸಂತರ್ಪಣೆ

ಸಿಪಿಐ ಮಂಜುನಾಥ ಎಸ್. ಮಾತನಾಡಿ ಗಡಿಯಲ್ಲಿ ಕಾಯುವ ಯೋದ್ಧರಂತೆ, ಪೋಲಿಸರು ಕಾಯುತ್ತಿದಾರೆ, ಕೊರೋನಾ ವೈರಸ್ ಚೈನ್ ಕಟ್ ಮಾಡುವಲ್ಲಿ ಇವರ ಸೇವೆ ಅಪಾರವಾಗಿದೆ, ಪೋಲಿಸರಿಗೆ ೩೦ ಸ್ಟ್ರೀಮರ್ ಕಿಟ್ ಗಳನ್ನು ಮಾಡಿಯಾಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಗುರುಬಾಯಿ ಶ್ರೀಕಾಂತ ಕೌವಲಗಾ ರವರು ನೀಡುವ ಮೂಲಕ ಪೋಲಿಸರು ಹಾಗೂ ಅವರ ಕುಟುಂಬಗಳನ್ನು ರಕ್ಷಿಸಿಕೊಳ್ಳವುದಕ್ಕೆ ತುಂಬಾ ಅನುಕೂಲವಾಗುತ್ತದೆ, ಕೊರೋನಾ ವಾರಿಯರ್ಸ್‌ರಾಗಿ ಸೇವೆ ಮಾಡುತ್ತಿರುವ ವೈದ್ಯರೀಗೆ, ನರ್ಸ್‌ಗಳಿಗೆ, ಆಶಾ ಕಾರ್ಯಕರ್ತರಿಗೆ ವಿವಿಧ ಸಂಘ, ಸಂಸ್ಥೆಗಳು, ಸಮಾಜ ಸೇವಕರು ಜೊತೆಯಾಗಿ ನಿಲ್ಲುವಂತದಾಗ ಮಾತ್ರ ಕೊರೋನಾ ಮಹಾಮಾರಿಯನ್ನು ಬೇಗನೆ ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.

ನಿಂಬರ್ಗಾ ಪೋಲಿಸ್ ಸ್ಟೇ?ನ್ ವ್ಯಾಪ್ತಿಯಲ್ಲಿ ಬರುವ ಮಾಡಿಯಾಳ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪೋಲಿಸರ್ ಸೇವೆಯನ್ನು ಪರಿಗಣಿಸಿ ಸ್ಟ್ರೀಮರ್ ಕಿಟ್ ನೀಡಿರುವುದು ಹೆಮ್ಮೆವೆನಿಸುತೆ, ಜನರ ಸೇವೆಯಲ್ಲಿಯೆ ನಿರಂತರವಾಗಿ ನಮ್ಮ ಜೀವನದ ಹಂಗನು ಲೆಕ್ಕಿಸದೆ ದುಡಿಯುತೇವೆ, ಈ ಸ್ಟ್ರೀಮರ್ ಕಿಟ್ ನೀಡಿದು ನಮ್ಮ ಜೋತೆಗೆ ಕುಟುಂಬವನ್ನು ರಕ್ಷಿಸುವ ಸಂಜೀವಿನಿ ನೀಡಿದಂತಾಗಿದೆ ಎಂದು ನಿಂಬರ್ಗಾ ಪಿಎಸ್‌ಐ ಸುವರ್ಣಾ ಮಲಶೇಟ್ಟಿ ಹೇಳಿದರು.

ಈ ಸಂಧರ್ಬದಲ್ಲಿ ಶ್ರೀಕಾಂತ ಕೌಲಗಾ, ಪೋಲಿಸ್ ಸಿಬ್ಬಂದಿಗಳಾದ ಭೀಮಾ ಶಂಕರ ಉಡಗಿ, ರಾಜಕುಮಾರ ಮಾಡ್ಯಳಕರ್, ಜಯಶ್ರೀ ಪೂಜಾರಿ, ಶ್ರೀಕಾಂತ ಸುತ್ತಾರ, ಶಂಕರ ಹುಗಾರ, ಪ್ರಶಾಂತ ಪೋದ್ದಾರ, ಸಿದ್ಧಾರಾಮ ದಶಮ್ಮಾ, ಪೀರಪ್ಪಾ ಬಡಿಗೇರ, ಮಲ್ಲಿಕಾರ್ಜುನ ಬಂಡೆ, ಲಕ್ಷಿಕಾಂತ ಗೌಂಡಿ, ರಮೇಶ ಎಲ್ಲದೆ, ಮಲ್ಲಿಕಾರ್ಜುನ ಉಟಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here