ಶಹಾಬಾದ: ಬಸವಣ್ಣನವರು ಎಂಟು ನೂರು ವ?ಗಳ ಹಿಂದೆಯೆ ಜಾತಿ ಪದ್ಧತಿಯನ್ನು ನಿರ್ಮೂಲನ ಮಾಡಿ ಸಾಮಾಜಿಕ ನ್ಯಾಯಕ್ಕೆ ಹೋರಾಡಿದವರು. ಅವರ ಅನುಯಾಯಿಗಳಾದ ನಾವು ಇಂದು ಸಹ ಅದನ್ನು ಅಳವಡಿಸಿಕೊಳ್ಳದೆ ಇರುವುದು ವಿ?ದನೀಯ ಎಂದು ಶಹಾಬಾದ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲೋಹಿತ್ ಕಟ್ಟಿ ಹೇಳಿದರು.
ಅವರು ಶುಕ್ರವಾರ ನಗರದ ಶಹಾಬಾದ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಣ್ಣನವರು ಸಾರಿದ ತತ್ವಾದರ್ಶಗಳು ನಾವು ಇಂದಿನ ನಮ್ಮ ಕಾನೂನಲ್ಲೂ ಕಾಣುತ್ತೇವೆ. ಅವರು ಕೇವಲ ರಾಜ್ಯಕ್ಕೆ ಅಥವಾ ದೇಶಕ್ಕೆ ಮಾದರಿಯಾಗದೆ ಇಡಿ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ.ಬಸವಣ್ಣನವನರು ಹಾಕಿಕೊಟ್ಟ ದಾರಿ, ಅವರ ತತ್ವಾದರ್ಶಗಳನ್ನು ಎ?ರ ಮಟ್ಟಿಗೆ ಅರ್ಥಮಾಡಿಕೊಂಡಿದ್ದೆವೇ ಎಂಬುದನ್ನು ವಿಚಾರ ಮಾಡಬೇಕಾಗಿದೆ ಎಂದರು.
ಜಾತೀಯತೆ,ಮೌಢ್ಯತೆ, ಕಂದಾಚಾರ ವಿರುದ್ಧ ಎದೆಗಾರಿಕೆ ತೋರಿದವರು ಬಸವಣ್ಣ
ಡಾ. ಅಹ್ಮದ್ ಪಟೇಲ್ ಮಾತನಾಡಿ,ಬಸವಣ್ಣನವರ ತತ್ವಗಳು ಎಂಟು ನೂರು ವ?ಗಳ ಹಿಂದೆ ಉದಯವಾಗಿದ್ದರು ಇಂದು ಹೊಸತನ ಕಾಣುತ್ತಿವೆ. ಬಸವಣ್ಣನವರ ವಿಚಾರಗಳು ಶ್ರೇ?ವಾಗಿರುವದರಿಂದ ಅವು ಎಂಟು ಸಾವಿರ ವ?ಗಳ ನಂತರವೂ ತನ್ನ ಹೊಸತನ ಕಾಯ್ದುಕೊಳ್ಳಲಿವೆ. ಬಸವಣ್ಣನ ಜಯಂತಿ ಆಚರಣೆಯ ಜತೆ ಜತೆಗೆ ಅವರ ಜಾತ್ಯತೀತತೆಯ ತತ್ವಗಳು, ಅವರ ವಿಚಾರ ಧಾರೆಗಳು ನಮ್ಮ ಜೀವನಕ್ಕೆ ದಾರಿದೀಪವಾಗಬೇಕು ಎಂದರು.
ಶರಣು ತುಂಗಳ ಮಾತನಾಡಿ, ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ಹೇಳಿದರು.
ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು: ಗುರಲಿಂಗಪ್ಪ
ನಿಂಗಪ್ಪ ಹುಳಗೋಳ, ಶಿವಾನಂದ ಪಾಟೀಲ, ನಾಗಣ್ಣ ಪಾಟೀಲ, ಶ್ರೀಧರ ಜೋಶಿ, ಜಗದೀಶ್ ಪಾಟೀಲ, ಶರಣು ಜೋಗುರ, ಸುರೇಶ್ ಬಡಿಗೇರ, ಬಸವರಾಜ ಸಾತಿಹಾಳ ಇತರರು ಇದ್ದರು.