ಕಲಬುರಗಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿರುವ ಕೋವಿಡ್ ವಿರುದ್ಧ ರೋಗಿಗಳಿಗೆ ನೀಡುವ ಔಷಧಿ 2 ಡಿಯಾಕ್ಸಿ-ಡಿ-ಗ್ಲೂಕೋಸ್ ನ್ನು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ರವರು ಬಿಡುಗಡೆ ಮಾಡಿರುವುದು ಇಂತಹ ಸಂಕಷ್ಟ ಸಮಯದಲ್ಲಿ ದೇಶದ ಜನರಿಗೆ ಹೊಸ ಭರವಸೆ ಮುಡಿಸಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಡಿಆರ್ ಡಿಒ ಮೂಲಕ ಮೊದಲ ದೇಶೀಯ ಸಂಶೋಧನಾ ಆಧಾರಿತ ಔಷಧಿಯನ್ನು ಕೋವಿಡ್ ವಿರುದ್ಧ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಸೋಂಕಿನಿಂದ ಶೀಘ್ರ ಗುಣಮುಖ ಹೊಂದಲು ಮತ್ತು ಆಕ್ಸಿಜನ್ ಮೇಲೆ ಹೆಚ್ಚು ಅವಲಂಬನೆಯನ್ನು ಈ ಔಷಧಿ ಕಡಿಮೆ ಮಾಡಲಿದೆ.
ಇನ್ನು ಆಕ್ಸಿಜನ್ ಉತ್ಪಾದನೆ ಘಟಕ ಮತ್ತು ಕೋವಿಡ ಆರ್ ಟಿ ಪಿ ಸಿ ಆರ್ ಟೆಸ್ಟ್ ನ ನಿಖರತೆ ತಿಳಿಯಲು ಅಭಿವೃದ್ಧಿ ಪಡಿಸಿರುವ ಕಿಟಗಳು ಹಾಗೂ ಕೋರೊನಾ ರೋಗಿಗಳಿಗಾಗಿ ಆಕ್ಸಿಜನಯುಕ್ತ ಹಾಸಿಗೆಗಳನ್ನು ನಿರ್ಮಾಣ ಮಾಡುತ್ತಿರುವುದು DRDO ಸಂಸ್ಥೆ ಹಾಗೂ ಅದರ ಎಲ್ಲಾ ವಿಜ್ಞಾನಿಗಳ ಶ್ರಮ ದೇಶವೇ ಮೆಚ್ಚುವಂತಹದ್ದಾಗಿದೆ .ಇದು ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಫಲಕಾರಿಯಾಗಲಿದೆ ಎಂದು ಅಂಬಾರಾಯ ಅಷ್ಠಗಿ ಹರ್ಷ ವ್ಯಕ್ತಪಡಿಸಿದ್ದಾರೆ.