ಚಿತ್ತಾಪುರ: ತಾಲ್ಲೂಕಿನ ಕದ್ದರಗಿ ಮತ್ತು ಲಕ್ಷ್ಮಿಪುರ ವಾಡಿ (ಗಾಂಧಿನಗರ) ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿಕೊಂಡಿರುವ ಮಾಹಿತಿಯ ಮೇರೆಗೆ ಸೇಡಂ ಸಹಾಯಕ ಆಯುಕ್ತ ವೀರಮಲ್ಲಪ್ಪ ಪೂಜಾರ್ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಹಠಾಥ್ ದಾಳಿ ಮಾಡಿ ಅಕ್ರಮವಾಗಿ ಕೂಡಿಟ್ಟ ಸುಮಾರು 35 ಟಿಪ್ಪರನಷ್ಟು ಮರಳನ್ನು ವಶಕ್ಕೆ ಪಡೆದಿದೆ.
ಕದ್ದರಗಿ ಗ್ರಾಮದ ಕಾಗಿಣಾ ನದಿಯ ದಂಡೆಯ ಮೇಲೆ ಕೂಡಿಟ್ಟ 20 ಟಿಪ್ಪರ್ ಮತ್ತು ಲಕ್ಣ್ಮೀಪುರ ವಾಡಿ (ಗಾಂಧಿನಗರ)ಯ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿದ 15 ಟಿಪ್ಪರ್ ನಷ್ಟು ಅಕ್ರಮ ಮರಳು ಪತ್ತೆ ಹಚ್ಚಿ ತನ್ನ ವಶಕ್ಕೆ ಪಡೆದುಕೊಂಡಿದೆ. ಜೊತೆಗೆ 20 ಟ್ಯಾಕ್ಟರ್ ಸಹ ವಶಕ್ಕೆ ಪಡೆಯುವ ಮೂಲಕ ಅಕ್ರಮ ದಂಧೆಕೋರರ ವಿರುದ್ಧ ಕಾನೂನು ಸಮರ ಸಾರಿದೆ.
ಸರ್ಕಾರಕ್ಕೆ ರಾಜಧನ ವಂಚಿಸಿ ಅಕ್ರಮ ಮರಳು ಸಂಗ್ರಹಣೆ ಮಾಡಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕದ್ದರಗಿ ಗ್ರಾಮ ಲೆಕ್ಕಿಗ ಬಸವರಾಜಪ್ಪ ವೀರಭದ್ರಪ್ಪ ಹೂಗಾರ ಅವರು ಚಿತ್ತಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಈ ಸಂದರ್ಭದಲ್ಲಿ ಚಿತಾಪುರ ತಹಶೀಲ್ದಾರ್ ಉಮಾಕಾಂತ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸ್ಥಳೀಯ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಇದ್ದರು.