ದೇಶದಲ್ಲಿ ಕಾನೂನು ಸುವ್ಯವಸ್ಥೆ ಜಾರಿಗೆ ವಿವಿಧ ಸಂಘಟನೆಗಳಿಂದ ಕ್ಯಾಂಡಲ್ ಮಾರ್ಚ್

0
91

ಕಲಬುರಗಿ: ನಗರದ ಜಗತ್ ಸರ್ಕಲ್ ಹತ್ತಿರ ದಲಿತ ಮತ್ತು ಮಸ್ಲಿಂರ ಮೇಲೆ ಹಲ್ಲೆ ಹಾಗೂ ಕೊಲೆ ಪ್ರಕರಣ ಖಂಡಿಸಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಜಾರಿಗೆ ಆಗ್ರಹಿಸಿ ಪ್ರಾಂತ್ಯ ರೈತ ಸಂಘ ಸೇರಿದಂತೆ ವಿವಿಧ ಜನಪರ ಸಂಘಟನೆಗಳಿಂದ ಕ್ಯಾಂಡಲ್ ಮಾರ್ಚ್ ನಡೆಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ, ಮಾನವೀಯತೆ ರಕ್ಷಣೆಗಾಗಿ ಕೇಂದ್ರ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಧರ್ಮದ ಹೆಸರಲ್ಲಿ ಕೋಮುವಾದಿಗಳು ಹಾದಿ ಬೀದಿಯಲ್ಲಿ ಕೊಲ್ಲುವದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಜನ ಸಾಮಾನ್ಯರಿಗೆ ಶಾಂತಿಯುತವಾಗಿ ಬದುಕುವ ಹಕ್ಕು ಸಂವಿಧಾನ ಪ್ರತಿಯೊಬ್ಬ ಪ್ರಜೆಗೆ ನೀಡಿದೆ ಸರಕಾರ ಸಂವಿಧಾನದ ಹಕ್ಕನ್ನು ಜಾರಿಗೆ ತರುವ ಮೂಲಕ ದಲಿತ ಹಾಗೂ ಮುಸ್ಲಿಂ ಹಲ್ಲೆ ಹಾಗೂ ಕೊಲೆಗಳನ್ನು ನಿಲ್ಲಿಸಿಬೇಂದು ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು.

ಮೊಂಬತ್ತಿ ಬೆಳಕಿನ ಪ್ರತಿಭಟನೆಯಲ್ಲಿ ಸುಲಫಲ ಮಠ ಹಾಗೂ ಶ್ರೀ ಸ್ವಾಮೀಜಿ ಶ್ರೀ ಶೈಲಂ ಪಿಠದ ಜಗದ್ಗುರು ಸಾರಂಗಧರ ದೇಸಿಕೇಂದ್ರ ಸ್ವಾಮೀಜಿ, ಮುಂತಾದ  ಮಠಾಧೀಶರು, ಫಾದರ್ ಶೆಂಟ್ರಲ್ ಇನ್ವರ್ ಸೆಂಟ್, ಸ್ಟೇಟ್ ಇನ್ವರ್ ಸಿಟ,ಅಡವಕೇಟ್ ವಾಹಜ್ ಬಾಬಾ, ಮಮಶೆಟ್ಟಿ ಶರಣಬಸಪ್ಪ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಜನ ಸಾಮಾನ್ಯರು ಪ್ರತಿಭಟನೆಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here