ಕೆಂಪೇಗೌಡರು ನಾಡು ಕಂಡ ಉತ್ತಮ ಆಡಳಿತಗಾರ-ಸೂಫಿಯಾ ಸುಲ್ತಾನ

0
73

ಸುರಪುರ: ಇಂದು ನಾವೆಲ್ಲ ಕರ್ನಾಟಕದ ರಾಜಧಾನಿ ಎಂದು ಕರೆಯುವ ಬೆಂಗಳೂರು ಅಂದು ಬೆಂದಕಾಳೂರಾಗಿತ್ತು.ಅದರ ಸಂಪೂರ್ಣ ಅಭೀವೃಧ್ಧಿ ಪಡಿಸಿದ ಶ್ರೇಯಸ್ಸು ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ.ಆದ್ದರಿಂದ ಕೆಂಪೇಗೌಡರು ಈ ನಾಡು ಕಂಡ ಉತ್ತಮ ಆಡಳಿತಗಾರರಾಗಿದ್ದಾರೆ ಎಂದು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮಾತನಾಡಿದರು.
ನಗರದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಜೆ ಸಲ್ಲಿಸಿ ಮಾತನಾಡಿ,ಕೆಂಪೇಗೌಡರು ಕಟ್ಟಿಸಿದ ಕೆರೆ,ಕುಂಟೆಗಳು ಹಾಗು ಕೋಟೆ ಕೊತ್ತಲಗಲು ಇಂದಿಗು ಅವರ ಆಡಳಿತದ ಜೀವಂತ ಸಾಕ್ಷಿಯಾಗಿವೆ.ಅವರ ಆಡಳಿತದ ಸಂದರ್ಭದಲ್ಲಿ ಇಡೀ ಅವರ ಸಾಮ್ರಾಜ್ಯ ಸುಭಿಕ್ಷೆಯಿಂದ ಕಂಗೊಳಿಸುತ್ತಿತ್ತು.ಅವರ ಆಡಳಿತ ಇಂದಿನ ಅನೇಕರಿಗೆ ಮಾದರಿಯಾಗಿದೆ.ಆದ್ದರಿಂದ ಅವರ ಆದರ್ಶವನ್ನು ನಾವೆಲ್ಲರು ಅರಿಯಬೇಕೆಂಬ ಉದ್ದೇಶದಿಂದ ಸರಕಾರ ಅವರ ಜಯಂತಿಯನ್ನು ಆಚರಿಸುತ್ತಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.ಕೆಂಪೇಗೌಡರ ಅಭಿಮಾನಿಗಳಾದ ಅಪ್ಪಾರಾವ್ ನಾಯಕ,ಸಿದ್ದನಗೌಡ ಹೆಬ್ಬಾಳ,ಮಲ್ಲು ಬಾದ್ಯಾಪುರ ಹಾಗು ತಹಸೀಲ್ ಕಚೇರಿ ಸಿಬ್ಬಂದಿಗಳಾದ ಸಿರಸ್ತೇದಾರ ಕೊಂಡಲ ನಾಯಕ,ಕಂದಾಯ ನಿರೀಕ್ಷಕ ಗುರುಬಸಪ್ಪ,ಪ್ರವೀಣ ಕುಮಾರ,ಭೀಮರಾಯ ಯಾದವ,ಗ್ರಾಮ ಲೆಕ್ಕಿಗರಾದ ಸೋಮಶೇಖರ ,ಶ್ವೇತ,ಮಲ್ಲಮ್ಮ,ಸಾವಿತ್ರಿ,ಸೋಮನಾಥ ಅಂಗಡಿ,ಹಣಮಂತ ಕಮತಗಿ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here