ರೆಡ್ ಕ್ರಾಸ್ ದಿಂದ ಕೊರೊನಾ ಮಾಸ್ಕ್, ಸಾಬೂನು ವಿತರಣೆ

0
49

ಕಲಬುರಗಿ: ಯಾವ ಜಾತಿ,ಮತ,ಪಂತ ಒಡವ,ಬಲ್ಲಿದ ಎನ್ನದೆ ಹಸಿದು ಬಂದು ಹೊಟ್ಟೆಗೆ ಪ್ರಾಸಾದ ನೀಡಿ ಸಂತೈಸುವ  ಸದಾ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ಮಾಡುತ್ತಿರುವ ಕೈಗಳು ಪ್ರಾಥಿಸುವ ತುಟಿಗಳಿಗಿಂತ ಶ್ರೇಷ್ಠ ಎಂದು ಕರ್ನಾಟಕ ಯುವಜನ ಒಕ್ಕೂಟದ ಜಿಲ್ಲಾ ಅದ್ಯಕ್ಷ ಅನಂತ ಗುಡಿ ಅವರು ಅಭಿಪ್ರಾಯ ಪಟ್ಟರು.

ವಿಶೇಷ ಪ್ರಧೂಷ ಪೂಜಾ ನಿಮಿತ್ತ ನಗರದ ಹೂರ ವಲಯದ ಲಕ್ಷ್ಮೀ ನಾರಾಯಣ ದೇವಸ್ಥಾನ ದಲ್ಲಿ ಕೊರೊನಾ ನಿಮಿತ್ತ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಹಾಜರಾದ ಭಕರಿಗೆ ಪ್ರಸಾದ ವ್ಯವಸ್ಥೆ ಮಾಡಿ ಸಾಮಾಜಿಕ ಅಂತರದಿಂದಿದಲ್ಲೆ ಕೂಡಿಸಿ ಪ್ರಸಾದ ವಿತರಿಸುವ ಗೆಳೆಯರ ಸೇವಾ ಬಳಗದವರಿಗೆಲ್ಲರಿಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಮಾಸ್ಕ ಹಾಗೂ ಸಾಬೂನು ವಿತರಿಸಿದ್ದು ಬಹಳ ಯೋಗ್ಯವಾದ ಕಾರ್ಯ ಎಂದು ಅನಂತ ಗುಡಿಯವರು ರೆಡ್ ಕ್ರಾಸ್ ಸಂಸ್ಥೆ ಅವರಿಗೆ ಅಭಿನಂದಿಸಿದ್ದಾರೆ.

Contact Your\'s Advertisement; 9902492681

ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅದ್ಯಕ್ಷ ರಾದ  ಅಪ್ಪಾರಾವ ಅಕ್ಕೇೂಣಿ ಉಪಾಧ್ಯಕ್ಷ ಅರುಣಕುಮಾರ ಲಾಹಿಯಾ ಕಾರ್ಯದರ್ಶಿ ರವೀಂದ್ರ ಶಾಹಾಬಾದಿ ಅವರ ಆದೇಶ ಮೆರೆಗೆ ಜಿಲ್ಲಾ ಸಮಿತಿಯ ಸದಸ್ಯರಾದ ಶಿವರಾಜ ಎಸ್ ಅಂಡಗಿ ಅವರ ನೇತ್ರತ್ವದಲ್ಲಿ ಸದರಿ ಅಭಿಯಾನ ಹಮ್ಮಿಕೊಳ್ಳಲಾಯಿತ್ತು.

ಮಾಹಾಮಾರಿ ಕೂರೊನಾ ವೈರಸ್ ಹರಡದಂತೆ  ಮುಂಜಾಗ್ರತೆಯ ವಹಿಸಲು ಜನಸಾಮಾನ್ಯರಿಗೆ ಜಾಗ್ರತಿ ಮೂಡಿಸುವ ಕುರಿತು ಕರ ಪತ್ರ ಹಂಚ್ಚುವ  ಮ‌ೂಲಕ ಮಾಸ್ಕ ಹಾಗೂ ಸಾಬೂನು ವಿತರಿಸಲಾಯಿತು. ಕರ್ನಾಟಕ ಯುವಜನ ಒಕ್ಕೂಟ ರಾಜ್ಯ ಸಂಚಾಲಕರಾದ  ವಿನೇೂದಕುಮಾರ ಜೇನೆವೆರ ಹಾಗೂ ಜಿಲ್ಲಾ ಅದ್ಯಕ್ಷ ಅನಂತ ಗುಡಿ ಅವರ ಸಹಕಾರದೊ೦ದಿಗೆ ಅಭಿಯಾನ ಜರುಗಿತು.

ಗೆಳೆಯರ ಸೇವಾ ಬಳಗದ ಸದಸ್ಯರಾದ ವಿಜಯೇಂದ್ರ ದೇಶಪಾಂಡೆ, ಶಾರದುಲ್ ಗಾರಂಪಳ್ಲಿ,ಅಜಯ ಕುಲಕರ್ಣಿ, ದತ್ತು ಲಂಡನ್‌, ಗುಂಡುರಾವ ಕುಸನೂರ,ಅಕ್ಷಯ್ ಕುಲಕರ್ಣಿ, ಅಶ್ವತ್ ಮಾಡ್ಯಾಳಕರ, ಶ್ರಯಾ ಕುಲಕರ್ಣಿ, ಸಂತೊಷ ಆಳಂದಕರ್,ರಸವೇಂದ್ರ ಕೇೂಳ್ಳಿ,ಹರಿಪ್ರಾಣ ಎಸ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here