ಲಾಕ್‌ಡೌನ್ ಸಂದರ್ಭ ಕಾರ್ಮಿಕರಿಗೆ ನೆರವು ಹೆಚ್ಚಿಸಲು ಕಾರ್ಮಿಕರ ಒಕ್ಕೂಟ ಮನವಿ

0
19

ಸುರಪುರ: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಇರುವುದರಿಂದ ಕಾರ್ಮಿಕರಿಗೆ ಸರಕಾರದ ನೆರವು ಘೋಷಣೆ ಮಾಡಿದ್ದು,ಅದು ಕೇವಲ ೩೦೦೦ ರೂಪಾಯಿ ಯಾವುದಕ್ಕೂ ಸಾಕಾಗುವುದಿಲ್ಲ.ಆದ್ದರಿಂದ ಕಾರ್ಮಿಕರಿಗೆ ೧೦ ಸಾವಿರ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸುರಪುರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ನಗರದ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿರುವ ಮುಖಂಡರು,ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಐದು ಸಾವಿರ ನೀಡಿದ ಸರಕಾರ ಈ ವರ್ಷ ಮೂರು ಸಾವಿರ ನೀಡುತ್ತಿದೆ.ಆದೆರ ಕಳೆದ ವರ್ಷಕ್ಕಿಂತ ಈ ವರ್ಷ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ.ಆದ್ದರಿಂದ ಈ ವರ್ಷ ಕಾರ್ಮಿಕರಿಗೆ ೧೦ ಸಾವಿರ ನೀಡಬೇಕೆಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಕೊಂಡಲನಾಯಕ ಅವರ ಮೂಲಕ ಸಲ್ಲಿಸಿದರು ಹಾಗು ಕಾರ್ಮಿಕರ ಇಲಾಖೆಯ ನಿರೀಕ್ಷಕರಿಗೂ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಮುಬೀನ್ ದಖನಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಂದಾಲಿ ಉಪಾಧ್ಯಕ್ಷ ವೈಜನಾಥ ಹೊಸಮನಿ ನಿಂಗಪ್ಪ ಪೂಜಾರಿ ಸೈಯದ್ ಅಜರ್ ಬುದ್ಧಿವಂತ ನಾಗರಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here