ವೃತ್ತಿಪರ ಛಾಯಾಗ್ರಹಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ

0
49

ಚಿತ್ತಾಪುರ:ಕರೋನಾ ಎರಡನೆಯ ಅಲೆಯಿಂದ ವೃತ್ತಿಪರ ಛಾಯಾಗ್ರಹಕರಿಗೆ ಜೀವನ ನಡೆಸಲು ತೀರ ಸಂಕಷ್ಟವಾಗಿದೆ ಅದಕ್ಕಾಗಿ ಶೀಘ್ರವೇ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ತಹಶೀಲ್ದಾರ ಉಮಾಕಾಂತ ಹಳ್ಳೆ ಅವರ ಮೂಲಕ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಾಲೂಕಾ ಫೋಟೋ ಮತ್ತು ವಿಡಿಯೋ ಗ್ರಾಫರ್ ಅಸೋಸಿಯೇಷನ್ ವತಿಯಿಂದ ಮನವಿ ಪತ್ರ ಸಲ್ಲಿಸಿದ್ದರು.

ತಮ್ಮ ಸ್ವತಃ ಜೀವನದ ದಾರಿಯಲ್ಲಿ ಯಶಸ್ಸನ್ನು ಕಾಣಲು ಹಲವಾರು ನಿರುದ್ಯೋಗ ಯುವಕರು ಸ್ವಉದ್ಯೋಗಕ್ಕೆ ಛಾಯಾಗ್ರಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದಾರೆ.ಆದರೆ ಕೋವಿಡ್-19 ರ ಎರಡನೆಯ ಅಲೆಯಿಂದ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

Contact Your\'s Advertisement; 9902492681

ಕರೋನಾ ಎರಡನೇಯ ಅಲೆಯ ನಿಯಂತ್ರಣದ ನಿಯಮದ ಪ್ರಕಾರ ಎಲ್ಲಾ ವೇದಿಕೆಯ ಕಾರ್ಯಕ್ರಮ,ಮನೋರಂಜನೆ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಲಾಗಿದೆ.ಇದರಿಂದ ಒಂದು ವರ್ಷದಿಂದ ಯಾವುದೇ ಕಾರ್ಯಕ್ರಮಗಳು ಇಲ್ಲಿದೆ ಛಾಯಾಗ್ರಹಕರು ತೀರ ಸಂಕಷ್ಟದಲ್ಲಿ ಇದ್ದಾರೆ ಜೊತೆಗೆ 2021ರ ಅಂತ್ಯದವರೆಗೂ ಯಾವುದೇ ಮದುವೆ ಮತ್ತು ಇತರ ಕಾರ್ಯಕ್ರಮಗಳು ಸಿಗುವುದಿಲ್ಲ ಹೀಗಾಗಿ ಕುಟುಂಬದ ನಿರ್ವಹಣೆ,ಮನೆಯ ಹಾಗೂ ಅಂಗಡಿಯ ಬಾಡಿಗೆ,ವಿದ್ಯುತ್ ಬಿಲ್ ಹಾಗೂ ಸಾಲದ ಹೊರೆ ಕಷ್ಟಕರವಾಗಿದೆ ಇದನ್ನು ಅರಿತುಕೊಂಡು ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ವಿಜಯಕುಮಾರ ರಾಠೋಡ, ಪದಾಧಿಕಾರಿಗಳಾದ ರವೀಂದ್ರ.ವಿ ಪಂಚಾಳ,ಅಂಬು ಚವ್ಹಾಣ್, ವೆಂಕಟೇಶ ಬಳಿಚಕ್ರ, ಮಧುಸೂಧನ ಕಾಶಿ,ಶಿವರಾಜ್ ಇನ್ನಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here