ಕಲಬುರಗಿ: ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಹಾಗೂ ರಾಜ್ಯಮಟ್ಟದ ರ್ಯಾಂಕಿಂಗನಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ಕಾಲೇಜು ಅಷ್ಟೇ ಅಲ್ಲದೇ ಶೈಕ್ಷಣಿಕವಾಗಿ ಹಿಂದುಳಿದ ಕಲಬುರಗಿ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.
2019ರ ನೀಟ್ ಫಲಿತಾಂಶವು ಶರಣಬಸವೇಶ್ವರ ಪಿಯು ಕಾಲೇಜಿಗೆ ಐತಿಹಾಸಿಕವಾಗಿದ್ದು. ಇಡೀ ಜಿಲ್ಲೆ ನೀಟ್ ರ್ಯಾಂಕನಲ್ಲಿ ಹಿಂದುಳಿದಿದ್ದರೂ, ಕಾಲೇಜಿನ ವಿದ್ಯಾಥರ್ಿಗಳು ರಾಷ್ಟ್ರ ಹಾಗೂ ರಾಜ್ಯಮಟ್ಟದ ರ್ಯಾಂಕಿಂಗನಲ್ಲಿ ಉತ್ತಮ ಅಂಕಗಳನ್ನು ಪಡೆಯುವದರ ಮೂಲಕ ಸಾಧನೆ ಮೆರದಿದ್ದಾರೆ.
ಕಾಲೇಜಿನ ಪ್ರಾಚಾರ್ಯ ಎನ್ ಎಸ್ ದೇವರಕಲ, ನೀಟ್ ರ್ಯಾಂಕ್ ಮೂಲಕ ಕಾಲೇಜಿನ ಮೂನ್ನೂರಕ್ಕೂ ಹೆಚ್ಚು ವಿದ್ಯಾಥರ್ಿಗಳು ಪ್ರತಿಷ್ಟಿತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ. 655ಕ್ಕೂ ಹೆಚ್ಚೂ ವಿದ್ಯಾಥರ್ಿಗಳು ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ. ಇದರ ಜೊತೆಗೆ ಕಾಲೇಜಿನ ವಿದ್ಯಾಥರ್ಿಗಳು ಪ್ರತಿಷ್ಟಿತ ಸಾಮಾನ್ಯ ಪ್ರವೇಶ ಪರೀಕ್ಷೆಗಳಾದ ಎಐಐಎಮ್ಎಸ್ ಮತ್ತು ಜೆಇಇ ಪರೀಕ್ಷೆಗಳಲ್ಲೂ ಸಾಧನೆ ತೋರಿದ್ದಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದ ರ್ಯಾಂಕಿಂಗನಲ್ಲಿ ನಾಲ್ವರು ವಿದ್ಯಾಥರ್ಿಗಳು 4000 ರ್ಯಾಂಕಿಂಗ್ ಒಳಗಡೆ, ಮೂವರು ವಿದ್ಯಾಥರ್ಿಗಳು 6500 ಒಳಗಡೆ ರ್ಯಾಂಕಿಂಗ್ ಪಡೆದಿರುವುದು ಕಾಲೇಜಿಗೆ ಮಹತ್ತರವಾಗಿದೆ. 631 ಅಂಕ ಪಡೆದಿರುವ ಸಾಯಿಕಿರಣ ರೆಡ್ಡಿ ರಾಷ್ಟ್ರಮಟ್ಟದಲ್ಲಿ 2365ನೇ ರ್ಯಾಂಕ್, 630 ಅಂಕ ಪಡೆದಿರುವ ಸಂದೇಶ ಕಟ್ಟಿಮನಿ 2803ನೇ ರ್ಯಾಂಕ್, ತಲಾ 621 ಅಂಕ ಪಡೆದಿರುವ ವೈಷ್ಣವಿ ರೆಡ್ಡಿ , ಪ್ರತೀಕ ಭಾಲ್ಕೆ, ಸಂಗಮೇಶ್ವರ ಸೋನಾಲಿ ಮತ್ತು ಕುಶಾಲ ಕ್ರಮವಾಗಿ 3860, 3944, 5098, 5223 ಹಾಗೂ 6369 ನೇ ರ್ಯಾಂಕ್ ಗಳಿಸಿದ್ದಾರೆ.
ರಾಜ್ಯಮಟ್ಟದ ನೀಟ್ ರ್ಯಾಂಕಿಂಗನಲ್ಲಿ ಕಾಲೇಜಿನ ಫಲಿತಾಂಶವು ಗಮನಾರ್ಹವಾಗಿದೆ. ಕಾಲೇಜಿನ ವಿದ್ಯಾಥರ್ಿಗಳಾದ ಸಾಯಿ ಕಿರಣ ರೆಡ್ಡಿ 64, ಸಂದೇಶ ಕಟ್ಟಿಮನಿ 68, ವೈಷ್ಣವಿ ರೆಡ್ಡಿ 84, ಪ್ರತೀಕ ಭಾಲ್ಕೆ 87ನೇ ರ್ಯಾಂಕ್ ಪಡೆದಿದ್ದಾರೆ. ರಾಜ್ಯಮಟ್ಟದ 100ರ ಕೆಳಗಿನ ರ್ಯಾಂಕಿಂಗನಲ್ಲಿ ನಾಲ್ವರು ಸ್ಥಾನ ಪಡೆದಿದ್ದಾರೆ. ಕಾಲೇಜಿನ ವಿದ್ಯಾಥರ್ಿಗಳು ಸಂಗಮೇಶ್ವರ (113) ಬಿ ಸೋನಾಲಿ (114) ಕುಶಾಲ( 134) ರ್ಯಾಂಕ್ ಪಡೆಯುವ ಮೂಲಕ 500 ರ್ಯಾಂಕ್ ಪಡೆದವರ ಸಾಲಿಗೆ ಸೇರಿದ್ದಾರೆ.
ಸಾಯಿಕಿರಣ ರೆಡ್ಡಿ, ಸಂದೇಶ ಕಟ್ಟಿಮನಿ, ವೈಷ್ಣವಿ ರೆಡ್ಡಿ, ಪ್ರತೀಕ ಭಾಲ್ಕೆ, ಸಂಗಮೇಶ್ವರ, ಬಿ ಸೋನಾಲಿ, ಕುಶಾಲ ಮತ್ತು ಎಂ ಅನೀಶ್ ರಾಜ್ಯಮಟ್ಟದ ರ್ಯಾಂಕಿಂಗನಲ್ಲಿ ಇಡೀ ಕಲಬುರಗಿ ಜಿಲ್ಲೆಗೆ ಮೊದಲ 8 ರ್ಯಾಂಕ್ ಪಡೆದ ಕೀತರ್ಿ ಕಾಲೇಜಿಗಿದೆ.
811ನೇ ರ್ಯಾಂಕ್ ಗಳಿಸಿರುವ ಕುಶಾಲ ಭುರೆ ಮತ್ತು 2320ನೇ ರ್ಯಾಂಕ್ ಪಡೆದಿರುವ ಸಂಜನಾ ಡಿ ಪಾಟೀಲ ಪ್ರತಿಷ್ಟಿತ ಎಐಐಎಂಎಸ್ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ. ಕಾಲೇಜಿನ ಮೂವರು ವಿದ್ಯಾಥರ್ಿಗಳಾದ 196ನೇ ರ್ಯಾಂಕ್ ಗಳಿಸಿರುವ ಆನಂದ ರಾಮಣ್ಣ, 938ನೇ ರ್ಯಾಂಕ್ ಪಡೆದಿರುವ ಸಂದೀಪ ರಾಠೋಡ್, 986ನೇ ರ್ಯಾಂಕ್ ಪಡೆದಿರುವ ದೇವರಾಜ ಗಣಪತಿ ಜೆಇಇ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಐಐಟಿಗಳಲ್ಲಿ ಮತ್ತು ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಾಧನೆ ಮಾಡಿದ್ದಾರೆ.
ಈ ಐತಿಹಾಸಿಕ ಸಾಧನೆಗೆ ಕಾರಣದಾರ ವಿದ್ಯಾಥರ್ಿಗಳಿಗೆ ಮತ್ತು ಬೋಧಕ ಸಿಬ್ಬಂದಿಗಳಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಅಭಿನಂದಿಸಿದ್ದಾರೆ.