ನಾಗೂರ-ಮಹಾಗಾಂವ ಗ್ರಾ.ಪಂ.ನಲ್ಲಿ ನರೇಗಾ ಯೋಜನೆಯಡಿ ಭಾರಿ ಅವ್ಯವವಹಾರ: ರಾಜು ಎಸ್.ಲೇಂಗಟಿ

0
21

ಕಲಬುರಗಿ: ಜಿಲ್ಲೆಯ ಕಮಲಾಪೂರ ತಾಲೂಕಿನ ನಾಗೂರ ಮತ್ತು ಮಹಾಗಾಂವ ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿಯಲ್ಲಿ ಭಾರಿ ಅವ್ಯವಹಾರ ಆಗಿರುವದನ್ನು ಖಂಡಿಸಿ ದಲಿತ ಸೇನೆ ಕಮಲಾಪೂರ ತಾಲೂಕ ಸಮಿತಿಯ ಅಧ್ಯಕ್ಷ ರಾಜು ಎಸ್.ಲೇಂಗಟಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ನಾಗೂರ ಹಾಗೂ ಮಹಾಗಾಂವ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ದಿ ಅಧಿಕಾರಿ ಜಗದೇವಿ ಪವಾರ ಹಾಗೂ ತಾಂತ್ರಿಕ ಸಹಾಯಕ ಇಂಜೀನಿಯರ ರಾಹುಲ್ ಹಾಗೂ ಕೂಲಿ ಸಹಾಯಕ ಮತ್ತು ಕಂಪ್ಯೂಟರ್ ಆಪರೇಟರ್ ಇವರುಗಳು ೨೦೨೦-೨೧ ಮತ್ತು ೨೦೨೧-೨೨ ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಸಮುದಾಯ ಕಾಮಗಾರಿಗಳಲ್ಲಿ ಸುಮಾರು ೨೦೦ ಕೂಲಿಕಾರರು ಕೆಲಸ ಮಾಡದೇ ಕೂಲಿ ಹಣ ಪಾವತಿ ಮಾಡಿ ಆ ಹಣವೂ ಮೇಟ ಮತ್ತು ಸದಸ್ಯರ ಮೂಲಕ ಕೂಲಿಕಾರರ ಹತ್ತಿರ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗದೇವಿ ಪವಾರ ಮತ್ತು ತಾಂತ್ರಿಕ ಸಹಾಯಕ ಇಂಜೀನಿಯರ ರಾಹು ಇವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನರೇಗಾ ಯೋಜನೆಯಡಿಯಲ್ಲಿ ೨೦೨೦-೨೧ ಸಾಲಿನಲ್ಲಿ ಆಗಿರುವ ಸಾಮಾಗ್ರಿ ಪವತಿ ಹಣವನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗದೇವಿ ಪವಾರ ಇವರು ತನ್ನ ಪತಿಯಾದ ಹರೀಲಾಲ ತಂದೆ ಶಂಕರ ಪವಾರ ಇವರ ಹೆಸರಿನಲ್ಲಿ ನಾಗೂರ ಗ್ರಾಮ ಪಂಚಾಯತಿಯ ೨೪,೦೩,೦೦೦ ಲಕ್ಷ ರೂ. ಮಹಾಗಾಂವ ಗ್ರಾಮ ಪಂಚಾಯತಿಯ ರೂ. ೩.೮೫.೧೫೪ ಲಕ್ಷ ರೂ. ಹಣ ಪಾವತಿ ಮಾಡಿರುತ್ತಾರೆ. ಒಟ್ಟು ಮೊತ್ತು ೨೭.೮೮.೧೫೪ ಲಕ್ಷ ರೂ> ಹಣವು ಇವರ ಅಧಿಕಾರ ದುರುಪಯೋಗ ಮಾಡಿಕೊಂಡು ಸರಕಾರದ ಹಣ ಕೊಳ್ಳೆ ಹೊಡೆದಿದ್ದಾರೆ. ಅದಕಾರಣ ಮಾಡಿರುವ ಈ ಅವ್ಯವಹಾರ ಪ್ರಕರಣವು ೭ ದಿನಗಳ ಒಳಗೆ ತನಿಖೆ ಮಾಡಿ ಪಾವತಿ ಮಾಡಿರುವ ಹಣವನ್ನು ಮರಳಿ ಸರಕಾರದ ಖಾತೆಗೆ ಜಮಾ ಮಾಡಬೇಕು ಹಾಗೂ ಪಿಡಿಓ ಜಗದೇವಿ ಪವಾರ ಮತ್ತು ತಾಂತ್ರಿಕ ಇಂಜೀನಿಯರ ರಾಹುಲ್ ಇವರನ್ನು ಅಮಾನತ್ತು ಮಾಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಕಮಲಾಪೂರ ಇವರಿಗೆ ದೂರು ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ರೀತಿ ತನ್ನ ಪ್ರದತ್ತವಾದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಈ ರೀತಿ ಸರಕಾರಕ್ಕೆ ಮೋಸ ಮಾಡಿರುವುದು ಸಂಪೂರ್ಣವಾಗಿ ಕಾನೂನು ಉಲ್ಲಂಘನೆ ಮಾಡಿರುವ ಪಿಡಿಓ ಜಗದೇವಿ ಪವಾರ ಹಾಗೂ ತಾಂತ್ರಿಕ ಸಹಾಯಕ ಇಂಜೀನಿಯರ ರಾಹುಲ, ಹಾಗೂ ಕೂಲಿ ಸಹಾಯಕ ಮತ್ತು ಕಂಪ್ಯೂಟರ್ ಆಪರೇಟರ್ ಇವರೆಲ್ಲರ ಬಗ್ಗೆ ಕೂಡಲೇ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here