ತಮ್ಮ ಜೀವನದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್ ಗಳ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ:ಶರ್ಮಾ

0
42

ಚಿತ್ತಾಪುರ:ಕುಟುಂಬ ಹಾಗೂ ತಮ್ಮ ಜೀವನದ ಹಂಗನ್ನು ತೊರೆದು ನಮೆಲ್ಲರಿಗಾಗಿ ಕರೋನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿಯರ್ಸ್ ಗಳ ಸೇವೆಗೆ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕ ಅನುಪಮ್ ಶರ್ಮಾ ಹೇಳಿದರು.

ಪಟ್ಟಣದ ಬಿಎಸ್ಎನ್ಎಲ್ ಕಚೇರಿ ಹತ್ತಿರ ಇರುವ ಭಾರತೀಯ ಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕ ಶರ್ಮಾ ಅವರು ಕರೋನಾ ವಾರಿಯರ್ಸ್ ಗಳಿಗೆ ಆಹಾರ ವಿತರಣೆ ಮಾಡಿ ಮಾತನಾಡಿದರು ಕರೋನಾ 2 ನೇ ಅಲೆಯ ತೀವ್ರತೆಯು ಹೆಚ್ಚಾಗುತ್ತಿರುವುದರಿಂದಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ.ಹೀಗಾಗಿ ಪಟ್ಟಣದಲ್ಲಿ ಇರುವ ಎಲ್ಲಾ ಹೋಟೆಲ್ ಹಾಗೂ ಖಾನವಳಿಗಳು ಮುಚ್ಚಿವೆ ಕರೋನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವರಿಗೆ ಸರಿಯಾದ ಸಮಯಕ್ಕೆ ಊಟ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Contact Your\'s Advertisement; 9902492681

ನಮ್ಮೆಲ್ಲರ ಒಳಿತಿಗಾಗಿ ಕೆಲಸ ಮಾಡುತಿಯುವ ವಾರಿಯರ್ಸ್ ಗಳಾದ ವೈದ್ಯಕೀಯ ಸಿಬ್ಬಂದಿ ವರ್ಗ ಹಾಗೂ ಪೊಲೀಸ್ ಇಲಾಖೆಯ ಸೇವೆ ಅಪಾರವಾಗಿದೆ.ತಮ್ಮ ಕುಟುಂಬ, ಮಕ್ಕಳು,ಅವರ ವೈಯಕ್ತಿಕ ಜೀವನವನ್ನು ಬದಿಗಿಟ್ಟು ದುಡಿಯುತ್ತಿದ್ದಾರೆ ಅವರಿಗೆ ಸೇವೆಗೆ ಬೆಲೆ ಕೊಡಲು ಸಾಧ್ಯವಿಲ್ಲ.ಅವರ ಸೇವೆಗೆ ನಾವು ಗೌರವವನ್ನು ಕೊಡಬೇಕು ಎಂದರು.

ನಮ್ಮ ಬ್ರಾಂಚ್ ನ ಸಿಬ್ಬಂದಿಗಳು ಎಲ್ಲರೂ ಸೇರಿ ನಮ್ಮ ಚಿಕ್ಕ ಸೇವೆ ಎಂದು ಮನವರಿಕೆ ಮಾಡಿಕೊಂಡು ವಾರಿಯರ್ಸ್ ಗಳಿಗೆ ಹಾಗೂ ಪಟ್ಟಣದಲ್ಲಿ ಇರುವ ನಿರ್ಗತಿಕರಿಗೆ, ಕರೋನಾ ಸೋಂಕಿತರಿಗೆ ಪಲಾವ್,ಸಾಂಬಾರ್,ಶಿರಾ ಮತ್ತು ಮೊಟ್ಟೆ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್ ಸಿಬಂದ್ದಿಗಳಾದ ಬಿಚ್ಚಪ್ಪ ಬೆಡಪಲ್ಲಿ,ಆರ್ಷಕುಮಾರ ವರ್ಮಾ,ಗೋಪಾಲ ಕೃಷ್ಣ, ಹೊಳೆಬಸಪ್ಪ,ಶಿವಕುಮಾರ,ಜ್ಯೋತಿ, ತಿಪ್ಪಣ್ಣ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here