ನಕಲಿ ದಾಖಲೆಗಳನ್ನು ಸೃಷ್ಠಿಸಿ ಪ್ಲಾಟ್ ಕಬ್ಜಾ ಮಾಡಿಕೊಂಡಿರುವ ಆರೋಪ: ಕ್ರಮಕ್ಕೆ ಆಗ್ರಹ

0
77

ಕಲಬುರಗಿ: ನಗರದ ಬಡೇಪೂರ  ಗ್ರಾಮದಲ್ಲಿರುವ ಸರ್ವೆ ನಂ: ೧೨೦/೧ ಇದ್ದು, ಪ್ಲಾಟ್ ನಂ. ೫ ಮತ್ತು ೬ ಪ್ಲಾಟ್‌ಗಳನ್ನು ಮನ್ಸಬ್‌ದಾರ ಲೇಔಟ್‌ನಲ್ಲಿ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ದಲಿತರ ಈ ಎರಡು ಪ್ಲಾಟುಗಳನ್ನು ತಮ್ಮ ಕಬ್ಜೆಗೆ ತೆಗೆದುಕೊಂಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಕಬ್ಜೆ ಮಾಡಿಕೊಂಡಿರುವ ವ್ಯಕಿಯ ವಿರುದ್ಧ ಕ್ರಮಕೈಗೊಂಂಡು ದಲಿತ ವ್ಯಕ್ತಿಗೆ ನ್ಯಾಯ ಒದಗಿಸಿಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಫರತಾಬಾದ ಅವರ ನೇತೃತ್ವದಲ್ಲಿ ಪೋಲಿಸ್ ಆಯುಕ್ತರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಡಿ.ಕೆ. ಮದನಕರ್, ಮಹ್ಮದ್ ಯಾಕುಬ ಗಂಗಾನಗರ, ಮಂಜುನಾಥ ಎಸ್.ಭಂಡಾರಿ, ಮಲ್ಲಿಕಾರ್ಜುನ್ ನಿಲ್ಲೂರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here