ಬೆಂಗಳೂರಿನ ನಿರ್ಮಾತೃ ಎಂದರೆ ಕೆಂಪೇಗೌಡರು: ಪಿಡಿಒ ಸರಸ್ವತಿ

0
92

ಸುರಪುರ: ಇಂದು ದೇಶದಲ್ಲಿಯ ಐಟಿ ಸಿಟಿ,ಸ್ವಚ್ಛ ಮತ್ತು ಸುಂದರ ನಗರ ಎಂದು ಕರೆಯಿಸಿಕೊಳ್ಳುವ ಹಾಗು ದೇಶದಲ್ಲಿ ತನ್ನದೆ ಆದ ಛಾಪನ್ನು ಹೊಂದಿರುವ ನಮ್ಮ ರಾಜಧಾನಿ ಬೆಂಗಳೂರಿನ ನಿರ್ಮಾತೃ ಎಂದರೆ ಅದು ಕೆಂಪೇಗೌಡರು ಎಂದು ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿ ಸರಸ್ವತಿ ಪತ್ತಾರ ಮಾತನಾಡಿದರು.
ತಾಲ್ಲೂಕಿನ ಬಾದ್ಯಾಪುರ ಗ್ರಾಮದ ಶ್ರೀಗುರು ಪ್ರಾಥಮಿಕ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡ ಸಾಂಸ್ಕೃತಿಕ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂದು ಕೆಂಪೇಗೌಡರು ಬೆಂಗಳೂರಲ್ಲಿ ಕೆರೆ ಕುಂಟೆಗಳನ್ನು ಕಟ್ಟಿಸದಿದ್ದರೆ ಇಂದು ಬೆಂಗಳೂರು ಇಷ್ಟೊಂದು ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.ಅವರು ಮಾಡಿದ ಅಂದಿನ ಕಾರ್ಯಗಳು ಸರ್ವಕಾಲಕ್ಕು ಮಾದರಿಯಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವಕ ಸಂಘದ ಅಧ್ಯಕ್ಷ ಮಲ್ಲು ಬಾದ್ಯಾಪುರ ಮಾತನಾಡಿ,ಕೆಂಪೇಗೌಡರು ಶೂರನು ಹಾಗು ಅಷ್ಟೆ ಅಂತಕರಣವುಳ್ಳ ಅರಸನಾಗಿದ್ದ,ಅವರು ಬೆಂಗಳೂರಲ್ಲಿ ಕಟ್ಟಿಸಿದ ಅನೇಕ ದೇವಾಲಯಗಳು,ಕೋಟೆ ಕೊತ್ತಲಗಳು ಹಾಗು ಭವ್ಯವಾದ ಅರಮನೆ ಅವರ ಆಡಳಿತಕ್ಕೆ ಸಾಕ್ಷಿಯಾಗಿವೆ.ಇಂದು ಸರಕಾರ ಕೂಡ ಕೆಂಪೇಗೌಡರ ಜಯಂತಿ ಆಚರಿಸುವ ಮೂಲಕ ನಾಡಿಗೆ ಅವರ ಇತಿಹಾಸವನ್ನು ತಿಳಿಸುವತ್ತ ಮುಂದಾಗಿರುವುದು ಶ್ಲಾಘನಿಯವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ನಾಡಪ್ರಭವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.ಈ ಸಂದರ್ಭದಲ್ಲಿ ಮುಖಂಡರಾದ ಸತೀಶ ಅಲಗೂರು,ಸಿದ್ದನಗೌಡ ಹೆಬ್ಬಾಳ,ಶಾಂತಯ್ಯಸ್ವಾಮಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗು ಮಕ್ಕಳು ಭಾಗವಹಿಸಿದ್ದರು.ಸ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here