ಬಾಲಕನೊಬ್ಬ ತನ್ನ ತಾಯಿಯ ಪ್ರಾಣ ಉಳಿಸಿಕೊಳ್ಳಲು: 25 ಸಾವಿರ ಸಹಾಯ

0
487

ಕಲಬುರಗಿ: ಬಾಲಕನೊಬ್ಬ ತನ್ನ ತಾಯಿಯ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡಿದ ಘಟನೆ ಮತ್ತು ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ತಾಯಿ ಧನಲಕ್ಷ್ಮೀ ಸ್ವಾಮಿ ಪರಿಸ್ಥಿತಿ ಕಂಡು ಅವಳ ಹೆಚ್ಚಿನ ಚಿಕಿತ್ಸೆಗೆ ಸಹಾಯ ಆಗುವಂತೆ ರಾಮನಗರ ಜಿಲ್ಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಸಮಾನ ಮನಸ್ಕರ ಗುಂಪಿನ ಈರಪ್ಪ ಮಹಾಲಿಂಗಪುರ, ಡಾ. ನಿರಂಜನ ಇಟ್ಟಣ್ಣವರ್, ಹಣಮಂತ ಹಲಗಲಿ, ವಿನೋದ ಬಡಿಗೇರ ಅವರು ತಮ್ಮ ಸ್ವಯಂ ಪ್ರೇರಣೆಯಿಂದ ಶಿಕ್ಷಕ ಮಹಾಂತೇಶ ಕುಂಬಾರ ಮತ್ತು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಶಿವರಾಜ್ ಅಂಡಗಿ ಅವರ ಸಹಕಾರದೊಂದಿಗೆ ೨೫,೦೦೦/- ರೂ.ಗಳ ಧನ ಸಹಾಯ ಮಾಡಿ ವಿಶೇಷ ಮಾನವೀಯತೆ ಮೆರೆದರು.

ಬೀದರನ ಗುಂಪಾ ನಗರದ ನಿವಾಸಿಯಾದ ಧನಲಕ್ಷ್ಮೀ ಸ್ವಾಮಿ ಗೆ ೫ ತಿಂಗಳ ಹಿಂದೆ ಬೆಂಕಿ ಹಚ್ಚವಿ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾಯಗೊಂಡಿದ್ದ ಧನಲಕ್ಷ್ಮೀ ಸ್ವಾಮಿ ದೇಹ ಸುಟ್ಟಿದ್ದರಿಂದ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Contact Your\'s Advertisement; 9902492681

ಈ ನಡುವೆ ಆಸ್ಪತ್ರೆಗೆ ಹಣ ಕಟ್ಟಲು ಸಾಧ್ಯವಾಗದೆ ಮಗ ಚನ್ನಬಸಯ್ಯಾ ಪರದಾಡುತ್ತಿದ್ದ ಸನ್ನಿವೇಶ ಸಾಮಾಜಿಕ ಜಾಲತಾಣದ ಮೂಲಕ ತಿಳಿದುಕೊಂಡು ಶಿಕ್ಷಕ ಈರಪ್ಪ ಮಹಾಲಿಂಗಪುರ ಅವರು ತಮ್ಮ ಗೆಳೆಯರೊಂದಿಗೆ ಕೂಡಿಕೊಂಡು ಮಹಾಂತೇಶ ಕುಂಬಾರ ಮತ್ತು ವಿಜಯಕುಮಾರ ತೇಗಲತಿಪ್ಪಿ, ಶಿವರಾಜ್ ಅಂಡಗಿ ಅವರ ಮುಖಾಂತರ ಆಸ್ಪತ್ರೆಯಲ್ಲಿರುವ ಅವರ ಕುಟುಟಂಬ ವರ್ಗಕ್ಕೆ ಹಣ ತಲುಪಿಸಿ ವಿಶೇಷ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here