ಕೊರೊನಾದಿಂದ ರಕ್ಷಣೆ ಪಡೆಯಲು ಲಸಿಕೆ ಹಾಕಿಸಿಕೊಳ್ಳಿ : ವರ್ಮಾ

0
29

ಶಹಾಬಾದ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿದ್ದು ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕರು ಕೊವಿಡ್ ಲಸಿಕೆ ಪಡೆದು ಕೊರೊನಾದಿಂದ ರಕ್ಷಣೆ ಪಡೆಯುವುದು ಸೂಕ್ತವಾಗಿದ್ದು ಎಲ್ಲರು ಲಸಿಕೆ ಪಡೆಯುವಂತೆ ತಹಸೀಲ್ದಾರ ಸುರೇಶ ವರ್ಮಾ ಕರೆ ನೀಡಿದ್ದಾರೆ.
ಅವರು ನಗರದ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ನವೀಕರಣಗೊಳಿಸುತ್ತಿರುವ ಕಾರ್ಮಿಕರಿಗೆ ಕೊವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು.

ಲಾಕ್ ಡೌನ್ ಅವಧಿಯಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಕಟ್ಟಡ ಕಾರ್ಮಿಕರು ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು ಹಾಗೂ ಅವರ ಕುಟುಂಬದ ಸದಸ್ಯರಿಗೂ ಕೊರೊನಾ ವೈರಸ್ ಸಮಸ್ಯೆ ಬಾದಿಸದಿರಲು ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದು ಸರಕಾರದ ನಿರ್ಣಯವಾಗಿದ್ದು ಸರ್ಕಾರದ ನಿರ್ದೇಶನದಂತೆಯೆ ಲಸಿಕೆಯನ್ನು ಹಾಕಿಸಲಾಗುತ್ತಿದೆ ಇದರಿಂದ ಯಾವುದೆ ಅಡ್ಡಪರಿಣಾಮಗಳು ಆಗಿರುವ ಉದಾಹರಣೆಗಳಿಲ್ಲ.ಅನಾವಶ್ಯಕ ಸುಳ್ಳು ಮಾಹಿತಿಯಿಂದ ಲಸಿಕೆ ಹಾಕಿಸಿಕೊಳ್ಳುವುದನ್ನು ನಿರಾಕರಿಸದೆ ತಮ್ಮ ಹಾಗೂ ತಮ್ಮ ಕುಟುಂಬದ ಹಿತದೃಷ್ಟಿಯಿಂದ ಕೊವಿಡ್ ಲಸಿಕೆ ಹಾಕಿಸಿಕೊಂಡು ಕೊವಿಡ್ ಸಂಕ?ದಿಂದ ಪಾರಾಗಲು ಎಲ್ಲಾ ಕಟ್ಟಡ ಕಾರ್ಮಿಕರ ಬಂಧುಗಳು ಕಡ್ಡಾಯವಾಗಿ ಕೊವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಅಣ್ಣಪ್ಪ ಕುದುರೆ, ಜೆಇ ಜಗನ್ನಾಥ, ಅಧಿಸೂಚಿತ ಕ್ಷೇತ್ರ ಸಮಿತಿಯ ಮುಖ್ಯಾಧಿಕಾರಿ ಪೀರಶೆಟ್ಟಿ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಮಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here