ತಪ್ಪದೇ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ : ಗುರಲಿಂಗಪ್ಪ

0
48

ಶಹಾಬಾದ ಕೊರೊನಾದಿಂದ ಜೀವ ಉಳಿಸಿಕೊಳ್ಳಲು ತಪ್ಪದೇ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಶುಕ್ರವಾರ ನಗರಸಭೆಯ ಆವರಣದಲ್ಲಿ ಅಂಗವಿಕಲರಿಗೆ ಆಯೋಜಿಸಲಾದ ಲಸಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ಲಸಿಕೆ ಕುರಿತು ನಿರ್ಲಕ್ಷ ಸಲ್ಲ. ವದಂತಿಗಳಿಗೆ ಕಿವಿಗೊಡದೆ ಎಲ್ಲರೂ ಲಸಿಕೆ ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿ ಪಡೆಯಬೇಕು. ಅಂಗವಿಕಲ ಹೊಂದಿದವರು ಮೊದಲು ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಸದ್ಯ ಸರ್ಕಾರ ಅಂಗವಿಕಲರಿಗೆ ಕೋವಿಡ್ ಲಸಿಕೆ ಹಾಕಲು ಮುಂದಾಗಿದ್ದು , ಎಲ್ಲರೂ ಲಸಿಕೆ ತಪ್ಪದೇ ಹಾಕಿಸಿಕೊಳ್ಳಬೇಕು.ಅಲ್ಲದೇ ಇತರರಿಗೂ ತಿಳಿಸಬೇಕು.

Contact Your\'s Advertisement; 9902492681

ಬಿಜೆಪಿ ಸರ್ಕಾರದಿಂದ ಟ್ಯಾಕ್ಸ್ ಭಯೋತ್ಪಾದನೆ: ಯೂಥ್ ಕಾಂಗ್ರೆಸ್ ಹೋರಾಟ

ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾ ವಿರುದ್ಧ ಹೋರಾಡುತ್ತದೆ. ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಗಿಸಬೇಕೆಂಬ ನಿಮ್ಮ ಕನಸುಗಳಿಗೆ ನೂರೆಂಟು ವಿಘ್ನಗಳಿವೆ. ಅದಕ್ಕಾಗಿ ಸರ್ಕಾರ ನಿಮ್ಮ ನೆರವಿಗೆ ಅನೇಕ ಯೋಜನೆಗಳನ್ನು ಮಾಡಿದೆ. ಕೊರೊನಾ ಎಲ್ಲರಿಗೂ ಸಂಕ? ತಂದೊಡ್ಡಿದೆ. ಸರ್ಕಾರ ಅದನ್ನು ಸಮರ್ಥವಾಗಿ ಎದುರಿಸುತ್ತಿದೆ. ಯಾರು ಭಯಪಡುವ ಅಗತ್ಯವಿಲ್ಲ. ಮಾರ್ಗಸೂಚಿ ಪಾಲಿಸುವ ಕೆಲಸ ಮಾಡಿದರೆ ಸಾಕು ಎಂದು ಅವರು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಅಂಗವಿಕಲರನ್ನು ಪೋಷಿಸಿ, ಬೆಳೆಸುವುದು ಸರ್ಕಾರದ ಕೆಲಸವಾದರೂ, ಅವರನ್ನು ಮಾನವೀಯತೆ ದೃಷ್ಠಿಯಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ ಅವರಿಗೆ ಲಸಿಕೆ ಹಾಕಿಸಿಕೊಳ್ಳಲು ಅರಿವು ಮೂಡಿಸಿ.ಅಲ್ಲದೇ ಅವರನ್ನು ಲಸಿಕೆ ಹಾಕಿಸಲು ಕರೆತನ್ನಿ ಎಂದು ಹೇಳಿದರು.

ನಗರಸಭೆಯ ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ,ರಾಜೇಶ, ಶರಣು, ಹುಣೇಶ, ಅನೀಲ ಹೊನಗುಂಟಿಕರ್, ಈರಣ್ಣ ಕುರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here