ಸುಳ್ಳು ಸುದ್ದಿಗಳ ವಾಸ್ತವಾಂಶ ಪತ್ತೆ ಹಚ್ಚುವ ಕಾರ್ಯಾಗಾರ

0
70

ಶಿವಮೊಗ್ಗ: ಪ್ರೆಸ್ ಟ್ರಸ್ಟ್ ಹಾಗೂ ಗೂಗಲ್ ಇನಿಷಿಯೇಟಿವ್ ಸಹೋಗದೊಂದಿಗೆ ಪತ್ರಿಕಾ ಭವನದಲ್ಲಿ  ಸುಳ್ಳು ಸುದ್ದಿಗಳ ವಾಸ್ತವಾಂಶ ಪತ್ತೆ ಹಚ್ಚುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಗಾರವನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಸುಳ್ಳು ಸುದ್ದಿಗಳ ಅಬ್ಬರ ಜನಸಾಮಾನ್ಯರ ಕಲ್ಪನೆಗೂ ಮೀರಿ ವ್ಯಾಪಿಸುತ್ತಿದೆ. ಸಾಮಾಜಿಕ‌ ಜಾಲತಾಣಗಳಲ್ಲಿ ಸತ್ಯದ ಸುದ್ದಿಗಳಿಗಿಂತ ಸುಳ್ಳಿನ ಸಂದೇಶಗಳು ಹೆಚ್ಚಾಗುತ್ತಿವೆ. ಸಾಮಾಜಿಕ‌ ಜಾಲತಾಣಗಳು ಮುದ್ರಣ ಹಾಗೂ ದೃಶ್ಯಮಾದ್ಯಮಗಳನ್ನು ಮೀರಿ ಬೆಳೆಯುತ್ತಿದೆ. ಈಗಿನ ಮೊಬೈಲ್ ಗಳಲ್ಲಿ ಬೆರಳತುದಿಯಲ್ಲಿ ಪ್ರಪಂಚವನ್ನ ನೋಡಬಹುದಾಗಿದ್ದು. ಜಾಲತಾಣಗಳಲ್ಲಿ ಸತ್ಯದ ಸುದ್ದಿಗಿಂತಲೂ ಸುಳ್ಳಿನ ಸುದ್ದಿ ಹೆಚ್ಚಾಗುತ್ತಿದೆ ಇದರಿಂದ ಸಮಾಜದ ಸ್ವಾಸ್ಥ ಹಾಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇನ್ನು ಕಾರ್ಯಗಾರದಲ್ಲಿ ಕಳೆದೆರೆಡು ವರ್ಷಗಳಲ್ಲಿ ಮಕ್ಕಳ ಕಿಡ್ನಾಪ್ ವಿಷಯದಲ್ಲಿ ವಾಟ್ಸ್ ಅಪ್ ನಲ್ಲಿ ಹರದಾಡಿದಂತಹ ಸುದ್ದಿಯಿಂದ ಆದ ಅನಾಹುತ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳಿನ ಸುದ್ದಿಗಳಿಂದ ಯುವಪೀಳಿಗೆಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಗೂಗಲ್ ಸಂಸ್ಥೆಯ ಕುಮಾರ್ ಪ್ರಾತ್ಯಕ್ಷಿಕೆ ಮೂಲಕ ಸುಳ್ಳಿ ಸುದ್ದಿಯನ್ನ ಪತ್ತೆಹಚ್ಚುವುದು ಹೇಗೆ ಎಂದು ತಿಳಿಸಿಕೊಟ್ಟರು.

ಕಾರ್ಯಗಾರದಲ್ಲಿ ಪ್ರೆಸ್ ಟ್ರಸ್ಟ್ ನ ಅಧ್ಯಕ್ಷ ಎನ್ ಮಂಜುನಾಥ್. ಸಂಸದ ಬಿ.ವೈ ರಾಘವೇಂದ್ರ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ೫೦ಕ್ಕೂ ಹೆಚ್ಚು ಪತ್ರಿಕೋಧ್ಯಮ ವಿದ್ಯಾರ್ಥಿಗಳು. ಕುವೆಂಪು ವಿವಿಯ ಪಿಹೆಚ್ ಡಿ ಸ್ಕಾಲರ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here