ಮರಗಳಿಗೆ ಕೊಡಲಿ ಪೆಟ್ಟಾದರೆ ಮನುಷ್ಯರಿಗೆ ಬದುಕಿಲ್ಲ: ಸ್ಮಶಾನದಲ್ಲಿ ಸಸಿ ನೆಟ್ಟು ಪರಿಸರ ಕಾಳಜಿ

0
31

ವಾಡಿ: ಸ್ವಚ್ಚ ಗಾಳಿ ಶುದ್ಧ ಆಮ್ಲಜನಕ ನೀಡಿ ಧರೆಯ ಜೀವಿಗಳಿಗೆ ಉಸಿರು ನೀಡುತ್ತಿರುವ ಗಿಡ ಮರಗಳಿಗೆ ಕೊಡಲಿ ಪೆಟ್ಟು ನೀಡಿದರೆ ಮನುಷ್ಯರಿಗೆ ಉಳಿಗಾಲವಿಲ್ಲ ಎಂದು ಮಹರ್ಷಿ ವಾಲ್ಮೀಕಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಭೀಮರಾವ ದೊರೆ ಹೇಳಿದರು.

ಪಟ್ಟಣದ ಮಹರ್ಷಿ ವಾಲ್ಮೀಕಿ ಸಮಾಜದ ಸ್ಮಾಶನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ಮರೆದು ಮಾತನಾಡಿದ ಅವರು, ಪ್ರಕೃತಿಯ ಮಡಿಲಲ್ಲಿ ಉಸಿರಾಟ ಕ್ರೀಯೆ ನಡೆಸುವ ಮಾನವ ಕುಲವು ತನ್ನ ಸ್ವಾರ್ಥಕ್ಕಾಗಿ ಅದರ ನಾಶಕ್ಕೆ ನಿಂತಿದೆ. ವಾಣಿಜ್ಯ ವ್ಯಾಪಾರದ ಮೋಹಕ್ಕೆ ಜೋತುಬಿದ್ದು ಮರಗಳ ಮಾರಣಹೋಮ ನಡೆಸುತ್ತಿದೆ. ಆಕ್ಸಿಜನ್ ಕೊರತೆಯಿಂದ ಅದೆಷ್ಟೋ ಜೀವಗಳು ಮಸಣ ಸೇರಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಮರಗಳಿಗಾಗಿ ಮರುಗದ ಮನುಷ್ಯ ಜೀವಸಂಕುಲದ ಶತ್ರುವಿದ್ದಂತೆ. ಮನೆಯಂಗಳದ ಖಾಲಿ ಜಾಗದಲ್ಲಿ ಕಾಂಕ್ರೀಟ್ ಹಾಕಿ ಸಸ್ಯ ಸಂಕುಲದ ಸರ್ವನಾಶಕ್ಕೆ ನಾಂದಿ ಹಾಡದೆ ಸಸಿಗಳನ್ನು ನೆಡುವ ಜತೆಗೆ ಇತರರಿಗೂ ಸಸಿಗಳನ್ನು ವಿತರಿಸಿ ಪರಿಸರ ಸ್ನೇಹಿಯಾಗಿ ಬದುಕಬೇಕು ಎಂದರು.

Contact Your\'s Advertisement; 9902492681

ಮಹರ್ಷಿ ವಾಲ್ಮೀಕಿ ಸಮಾಜದ ವಾಡಿ ವಲಯ ಅಧ್ಯಕ್ಷ ನಾಗರಾಜ ಜಮಾದಾರ, ಎಪಿಜೆ ಅಬ್ದುಲ್ ಕಲಾಂ ಮೆಮೊರಿಯಲ್ ಟ್ರಸ್ಟ್ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಮಹಾದೇವ ದೊರೆ, ಅಬ್ದುಲ್ ರಶೀದ್, ಸಾಯಬಣ್ಣ ದೊರೆ, ಮಹ್ಮದ್ ನೂರ್, ವಿಜಯಕುಮಾರ ದೊರೆ, ಮರಶುರಾಮ ದೊರೆ, ಹಣಂತರಾಯ ದೊರೆ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here