ವಾಡಿ(ಗ್ರಾಮೀಣ): ಉದ್ಯೋಗ ವಂಚಿತ 400 ಜನ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ನೀಡುವಂತೆ ಮತ್ತು ಪಿಡಿಒ ರೇಷ್ಮಾ ಕೊತ್ವಾಲ ಅವರನ್ನು ವರ್ಗಾವಣೆ ಮಾಡುವಂತೆÉ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಇಂಗಳಗಿ ಗ್ರಾಮ ಘಟಕ ಮತ್ತು ಸಿಐಟಿಯು ನೇತೃವದಲ್ಲಿ ಇಂಗಳಗಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು.
ನರೇಗಾ ಯೋಜನೆಯಡಿ ಕೂಲಿ ಬಯಿಸಿ ಸುಮಾರು 700 ಜನ ಕಾರ್ಮಿಕರಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಕೇವಲ 300 ಜನ ಕಾರ್ಮಿಕರಿಗೆ ಮಾತ್ರ ಕೆಲಸ ನೀಡಿ, ಉಳಿದ 400 ಜನ ಕಾರ್ಮಿಕರಿಗೆ ಉದ್ಯೋಗದಿಂದ ವಂಚಿತ ಮಾಡಲಾಗಿದೆ. ಉಳಿದ ಕಾರ್ಮಿಕರ ಬಗ್ಗೆ ಪಿಡಿಒ ರೇಷ್ಮಾ ಕೋತ್ವಾಲ ಅವರನ್ನು ಕೇಳಿದರೆ ಒಂದು ವಾರದೊಳಗೆ ಎಲ್ಲಾ ಕಾರ್ಮಿರಿಗೆ ಕೆಲಸ ನೀಡಲಾಗುತ್ತದೆಂದು ಹೇಳಿ, 44ದಿನ ಕಳೆದರು ಇಲ್ಲಿಯವರೆಗೆ ಕೆಲಸ ನೀಡಿಲ್ಲ. ಎಂದು ಕಾರ್ಮಿಕ ಮುಖಂಡರು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾಮಾರಿ ಕೊರೋನಾ ಎರಡನೇ ಅಲೆ ಮತ್ತು ಲಾಕ್‍ಡೌನ್‍ದಿಂದ ಮಹಾನಗರಗÀಳಿಗೆ ಗುಳೆ ಹೋದ ಕಾರ್ಮಿಕರು ಮರಳಿ ಊರಿಗೆ ಬಂದಿದ್ದಾರೆ. ಕೆಲಸ ಇಲ್ಲದೆ ತುತ್ತು ಅನ್ನಕ್ಕಾಗಿ ಕಾರ್ಮಿಕರು ಅಲೆಯುವಂತಾಗಿದೆ. ಆದರೂ ಅಧಿಕಾರಿಗಳಿಗೆ ಕಾರ್ಮಿಕರ ಕೂಗೂ ಕೇಳಿಸುತ್ತಿಲ್ಲ. ಎಂದು ಅಧಿಕಾರಿಗಳ ವಿರುದ್ಧ ಕಾರ್ಮಿಕರು ಧಿಕ್ಕಾರ ಕೂಗಿದರು.
ಸುಮಾರು 8 ವರ್ಷದಿಂದ ಇಂಗಳಗಿ ಗ್ರಾಮ ಪಂಚಾಯಿತಿಯಲ್ಲೇ ಪಿಡಿಒ ಆಡಳಿತ ನಡೆಸುತ್ತಿರುವದರಿಂದ ಅಧಿಕಾರ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದ ಹಾಗೂ ಸರಕಾರದ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ವಿಫಲರಾದ ಪಿಡಿಒ ರೇಷ್ಮಾ ಕೊತ್ವಾಲ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಾಗುತ್ತದೆ ಎಂದು ಕಾರ್ಮಿಕರು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಚ್ಚಲಗುಂಡಿ ಕಾಮಗಾರಿಯಲ್ಲಿ ಕಾರ್ಮಿಕರು ತಗ್ಗು ಅಗೆದಿದ್ದಾರೆ. ಆದರೆ ಎನ್‍ಎಮ್‍ಆರ್ ತೆಗೆದಿಲ್ಲ. ಅವರ ಖಾತೆಗೆ ಹಣ ಕೂಡಾ ಜಮೆಯಾಗಿಲ್ಲ. ನರೇಗಾ ಕೂಲಿ ಬಯಸಿ ನಮೂನೆ 6ನಲ್ಲಿ ಅರ್ಜಿ ಸಲ್ಲಿಸಿದರೆ ಗಣಕಯಂತ್ರ ಸಿಬ್ಬಂದಿ ಗಾಯತ್ರಿ ತಮ್ಮ ಮನಸ್ಸಿಗೆ ಬಂದಂತೆ ಎನ್‍ಎಮ್‍ಆರ್ ತೆಗೆಯುತ್ತಾರೆ. ಇದರಿಂದ ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಚಿತ್ತಾಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಕರ, ಇಂಜನಿಯರ್ ಅಶೋಕ ಭೇಟಿ ನೀಡಿದರು. ಒಂದು ವಾರದೊಳಗೆ ಪಿಡಿಒ ಅವರನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕೆಪಿಆರ್‍ಎಸ್ ತಾಲ್ಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ, ಗ್ರಾಮ ಪಂಚಾಯಿತಿ ನೌಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಮಲ್ಲಣ್ಣ ಕಾರೋಳ್ಳಿ, ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ, ಕೆಪಿಆರ್‍ಎಸ್ ಶಹಾಬಾದ್ ಸಂಚಾಲಕ ರಾಯಪ್ಪ ಹುರುಮುಂಜಿ, ಶಕುಂತಲಾ ಪವಾರ್, ಭಾಗಮ್ಮ ಹೊರಂಚಿ, ವಿಜಯಲತಾ, ಮುಬಾರಕ್, ಮಲ್ಲಮ್ಮ ಸಂಕ ಭಾಗಿಯಾಗಿದ್ದರು. ಸಬ್‍ಇನ್‍ಸ್ಪೆಕ್ಟರ್ ವಿಜಯಕುಮಾರ ಬಾವಗಿ, ಪೊಲೀಸ್ ಪೇದೆ ದೊಡ್ಡಪ್ಪಾ ಪೂಜಾರಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.