ಸುರಪುರ: ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳಿ ಮತ್ತು ಅವರ ಕುಟುಂಬದ ಮೇಲೆ ಸುಳ್ಳು ಆರೋಪಮಾಡಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭೆ ಸುರಪುರ ತಾಲೂಕ ಘಟಕದ ಹಾಗೂ ಯುವ ಘಟಕದ ವತಿಯಿಂದ ತಹಸಿಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಲ್ಲಿಸಲಾಯಿತು.
ಮನವಿಸಲ್ಲಿಸಿ ಮಾತನಾಡಿದ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಇತ್ತಿಚೆಗೆ ಜೇವರ್ಗಿ ತಾಲೂಕಿನ ಶಾಂತಪ್ಪ ಕುಡಲಗಿ ಅವರ ಸಹೋದರನ ಕೋಲೆ ಪ್ರಕರಣದಲ್ಲಿ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳ್, ಬಸವರಾಜಪ್ಪ ಪಾಟೀಲ್ ನರಬೋಳ್ ಹಾಗೂ ಇತರೆ ವೀರಶೈವ ಮುಖಂಡರ ಮೇಲೆ ದಾಖಲಾಗಿರುವ ದೂರು ಸಂಪೂರ್ಣ ರಾಜಕಿಯ ಪ್ರೇರಿತವಾಗಿದ್ದು, ಮಾಜಿ ಶಾಸಕರ ಬೆಳವಣಿಗೆಯನ್ನು ಸಹಿಸದೆ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ದೂರು ದಾಖಲಿಸಿರುವುದನ್ನು ಮಹಾಸಭೆ ಖಂಡಿಸುತ್ತದೆ, ಮಾನ್ಯ ಮುಖ್ಯಮಂತ್ರಿಗಳು ಸುಳ್ಳು ಪ್ರಕರಣವನ್ನು ಕೈಬಿಟ್ಟು ನ್ಯಾಯ ಒದಗಿಸಬೇಕು ವಿಳಂದವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸಿಲ್ದಾರ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಹಾಸಭೆಯ ತಾಲೂಕ ಅಧ್ಯಕ್ಷ ಮಂಜುನಾಥ ಜಾಲಹಳ್ಳಿ, ಉಪಾಧ್ಯಕ್ಷೆ ಜಯಲಲಿತಾ ಪಾಟೀಲ್, ಜಗದೀಶ ಸೊನ್ನದ ಕೆಂಭಾವಿ, ಸಿದ್ದನಗೌಡ ಹೆಬ್ಬಾಳ, ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪೂರ, ಕೋಶಾಧ್ಯಕ್ಷ ಬಸವರಾಜ ಬೂದಿಹಾಳ, ಯುವ ಘಟಕದ ಅಧ್ಯಕ್ಷ ಶಿವರಾಜ ಕಲಿಕೇರಿ, ಪ್ರಮುಖರಾದ ಸೋಮಶೇಖರ ಶಾಬಾದಿ, ಮಲ್ಲು ಬಾದ್ಯಾಪುರ, ಮಲ್ಲಿಕಾರ್ಜುನ ಸುಭೇದಾರ, ಮಲ್ಲು ಹೂಗಾರ, ಆನಂದ ಮಡ್ಡಿ, ಲಿಂಗರಾಜ ಶಾಬಾದಿ, ದೇವರಾಜ ನಂದಗೀರಿ ಸೇರಿದಂತೆ ಇತರರಿದ್ದರು.