ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಸಂಘಟನಾ ಸದಸ್ಯತ್ವ ಅಭಿಯಾನ ಪರ್ವ ಕಾರ್ಯಾಗಾರ ಇಂದು ಬೆಳಿಗ್ಗೆ ನಡೆಯಿತು.
ಬಿಜೆಪಿ ಸಂಘಟನಾ ಪ್ರಕಾರಗಳಾದ ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಘುನಾಥ್ ಮಲ್ಕಾಪುರೆ ರವರ ಮಾತಾಡಿದ ಸಂಕ್ಷಿಪ್ತ ವಿವರ ಬಿಜೆಪಿ ಪಕ್ಷ ಈ ದೇಶದಲ್ಲಿ ವಿಭಿನ್ನವಾಗಿರುತ್ತದೆ ಮತ್ತು ಸಂಘಟನಾತ್ಮಕ ಶಕ್ತಿಯಿಂದ ತನ್ನ ಕಾಲ ಮೇಲೆ ತಾನೇ ತ್ತಿರುವ ಏಕೈಕ ಪಕ್ಷ ಅದು ಬಿಜೆಪಿ. ಬಿಜೆಪಿಯಲ್ಲಿ ಆಂತರಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹಾದಿಯಲ್ಲಿ ವ್ಯವಸ್ಥಿತವಾದ ಅಂತ ಸಂಘಟನೆಯ ವ್ಯವಸ್ಥೆ ಯಾವುದಾದರೂ ಒಂದು ಪಕ್ಷದಲ್ಲಿ ಇದೆ ಎಂದರೆ ಅದು ಬಿಜೆಪಿ ಪಕ್ಷದಲ್ಲಿದೆ ಬಿಜೆಪಿ ಪ್ರಾಮಾಣಿಕವಾಗಿ ದುಡಿದವರಿಗೆ ಪಕ್ಷ ನಿಷ್ಠರಿಗೆ ಸಾಮಾನ್ಯರಿಂದ ಅತಿ ಸಾಮಾನ್ಯ ಕಾರ್ಯಕರ್ತರಿಗೂ ರಾಜ್ಯ ರಾಷ್ಟ್ರ ಮತ್ತು ಪ್ರಧಾನಿ ಮತ್ತು ರಾಷ್ಟ್ರಪತಿಗಳಾದ ಅವಕಾಶ ಬಿಜೆಪಿ ಮಾಡಿಕೊಟ್ಟಿದೆ ಇಂತಹ ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಿಜೆಪಿ ಆಂತರಿಕ ಸಂವಿಧಾನದಂತೆ ಪ್ರತಿ ಮೂರು ವರ್ಷಕ್ಕೊಂದು ಒಂದು ಬಾರಿ ಸಂಘಟನಾತ್ಮಕ ಜವಾಬ್ದಾರಿಗಳನ್ನು ವಿಸ್ತರಿಸಿರುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತದೆ ಎಂದರು.
ಪಕ್ಷದ ಸಂಘಟನೆಯಲ್ಲಿ ನಿಷ್ಠಾವಂತಿಕೆ ಮತ್ತು ಪಕ್ಷದ ಪ್ರಾಮಾಣಿಕ ಕೆಲಸ ನಿರ್ವಹಣೆ ಕಾರ್ಯಕರ್ತರ ಜವಾಬ್ದಾರಿಯಾಗಬೇಕು ಈ ಸಂದರ್ಭದಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಜಿ.ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್, ಶಾಸಕರಾದ ಬಸವರಾಜ್ ಮತ್ತಿಮೂಡ್, ಸದಸ್ಯತ್ವ ಅಭಿಯಾನದ ಜಿಲ್ಲಾ ಸಂಚಾಲಕ ರಾಜು ನೀಲಂಗ, ಲಿಂಗರಾಜ್ ಬಿರಾದರ್ ಪ್ರಧಾನ ಕಾರ್ಯದರ್ಶಿ ರವಿ ಬಿರಾದರ್, ಮುಖಂಡ ಶಶೀಲ್ ನಮೋಶಿ, ಸುಭಾಷ್ ಬಿರಾದರ್ ಮತ್ತಿತರರು ಭಾಗವಹಿಸಿದ್ದರು.