ಕಲಬುರಗಿ: ಇಂದು 6 ನೆಪಡೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತಾಜ್ ಸುಲ್ತಾನಪುರ್ ನಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ರಕ್ತದಾನ ಶಿಬಿರ ಕಾರ್ಯಕ್ರಮ ಜರುಗಿತು.
ಈ ವೇಳೆಯಲ್ಲಿ ಕರ್ನಾಟಕ ಪೊಲೀಸ ಮಹಾ ಸಂಘದ ಜಿಲ್ಲಾ ಅಧ್ಯಕ್ಷರಾದ ರವಿ ದೇಗಾಂವ ಮಾತನಾಡಿ, ಪೋಲಿಸ ಸಿಬ್ಬಂದಿಯವರಿಗೆ ಕರೋನಾ ಮಹಾಮಾರಿ ಸಂಕ್ರಮಿಕ ರೋಗ ಮಧ್ಯದಲ್ಲಿ ರಕ್ತದ ಕೊರತೆ ಇಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲಕ್ಕಾಗಿ ಪೊಲೀಸ್ ಸಿಬ್ಬಂದಿಗಳು ಇಂದು ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಪೊಲೀಸ್ ಸಿಬ್ಬಂದಿ ಅವರು ಈ ಕರೋನಾ ಮಹಾಮಾರಿ ಸಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಜೊತೆಗೆ ಸಮಾಜಕಾರ್ಯಕ್ಕೆ ಮುಂದಾಗಿರವುದು ಕೃತಜ್ಞೆತೆಯ ವಿಷಯವಾಗಿದೆ ಎಂದು ಹೇಳಿದರು.
GIMS ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ್, ಡಾ. ಮಮತಾ ಪಾಟೀಲ್ ಅವರ ನೇತೃತ್ವದಲ್ಲಿ ಈ ರಕ್ತದಾನ ಶಿಬಿರ ನಡೆಸಲಾಯಿತು.