ಶೌಚಾಲಯ ನಿರ್ಮಾಣದಲ್ಲಿ ಅಕ್ರಮ: ಶಿವಶಂಕರ ಹೊಸ್ಮನಿ

0
29

ಸುರಪುರ: ತಾಲೂಕಿನ ಮಾಲಗತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮಾಲಗತ್ತಿ ತಿಪ್ಪನಟಗಿ ಗ್ರಾಮಗಳಲ್ಲಿ ೨೦೧೭ ರಿಂದ ೨೦೨೦ ರವರೆಗೆ ಎಸ್.ಬಿ.ಎಮ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ತಾಲೂಕು ಸಂಚಾಲಕ ಶಿವಶಂಕರ ಹೊಸ್ಮನಿ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು,ಎಸ್.ಬಿ.ಎಮ್ (ಸ್ವಚ್ಛ ಭಾರತ ಮಿಷನ್) ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡಿರುವ ನಿಜವಾದ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೆ ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿಗಳು ಹಾಗು ಗಣಕಯಂತ್ರ ಆಪರೇಟರ್ ಜಂಟಿಯಾಗಿ ತಮಗೆ ಬೇಕಾದವರ ಖಾತೆಗೆ ಹಣ ಜಮಾ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ.

Contact Your\'s Advertisement; 9902492681

ನೂರಾರು ಫಲಾನುಭವಿಗಳು ಶೌಚಾಲಯ ಕಟ್ಟಿಕೊಂಡರು ಅವರ ಖಾತೆಗೆ ಇಲ್ಲಯವರೆಗೆ ಹಣ ಹಾಕಿಲ್ಲ.ಕೇಳಿದರೆ ಮುಂದೆ ನೋಡೋಣ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.ಇದರ ಕುರಿತು ಈಗಾಗಲೆ ಆಯುಕ್ತರಿಗೆ ಮತ್ತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ,ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಆದ್ದರಿಂದ ಈಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದ್ದು ಅವರು ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು ಪಂಚಾಯತಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಮಲ್ಲಿಕಾರ್ಜು ತಳವಾರಗೇರಿ ಮಲ್ಲಿಕಾರ್ಜುನ ಜಾಲಿಬೆಂಚಿ ಶರಣಪ್ಪ ತೆಗ್ಗೆಳ್ಳಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here