ಜೈನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ

0
21

ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜೈನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಜೈನ್ ದೇವಾಲಯ (ಬಸದಿ) ನವೀಕರಣ, ದುರಸ್ತಿ ಹಾಗೂ ಜೀರ್ಣೊದ್ಧಾರಕ್ಕಾಗಿ ಸರ್ಕಾರದಿಂದ ಅನುದಾನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಜೈನ್ ದೇವಾಲಯ (ಬಸದಿ) ನವೀಕರಣ, ದುರಸ್ತಿ, ಜೀರ್ಣೊದ್ಧಾರಕ್ಕಾಗಿ ಸರ್ಕಾರದಿಂದ/ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಹಾಯ ಅನುದಾನ ನೀಡಲಾಗುತ್ತಿದ್ದು, ಜೈನ ಬಸದಿ ಸಮಿತಿ/ಮಂಡಳಿಗಳು ಈ ಯೋಜನೆಯಡಿ ಸೌಲಭ್ಯ ಪಡೆಯಬಹುದಾಗಿದೆ.

Contact Your\'s Advertisement; 9902492681

ಭರ್ತಿ ಮಾಡಿದ ಪ್ರಸ್ತಾವನೆಯನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ಮೊದಲನೇ ಮಹಡಿಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ ಆಯಾ ತಾಲ್ಲೂಕಿನ ಮಾಹಿತಿ ಕೇಂದ್ರದಿಂದ ಹಾಗೂ ಇಲಾಖೆಯ http://www.gokdom.kar.nic.in ವೆಬ್‍ಸೈಟ್‍ದಿಂದ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here