ಜಿಲ್ಲೆಯ ವಿಕಲಚೇತನರು ವಿವಿಧ ಬಗೆಯ ಸಾಧನ ಸಲಕರಣೆ ಪಡೆಯಲು ಸೂಚನೆ

0
31

ಕಲಬುರಗಿ:  ಕೇಂದ್ರ ಸರ್ಕಾರದ ಆಡಿಪ್ ಹಾಗೂ ಸಿ.ಎಸ್.ಆರ್. ಯೋಜನೆಯಡಿ ಮಂಜೂರಾದ ವಿವಿಧ ಬಗೆಯ ಸಾಧನ ಸಲಕರಣೆಗಳನ್ನು ಕಲಬುರಗಿ ಜಿಲ್ಲೆಯ ವಿಕಲಚೇತನರು ಕಲಬುರಗಿ ಜಿಲ್ಲಾ ವಿಕಲಚೇತನರ ಕಚೇರಿಗೆ ಭೇಟಿ ನೀಡಿ ಪಡೆಯಬೇಕೆಂದು ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಸಾಧಿಕ್ ಹುಸೇನ್‍ಖಾನ್ ಅವರು ತಿಳಿಸಿದ್ದಾರೆ.

ಜಿಲ್ಲಾ ವಿಕಲಚೇತನರ ಇಲಾಖೆಯಿಂದ ಈ ಹಿಂದೆ 2020-21 ನೇ ಸಾಲಿನಲ್ಲಿ ಆಯಾ ತಾಲೂಕಾ ಪಂಚಾಯತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ವಿವಿಧ ಬಗೆಯ ಸಾಧನ ಸಲಕರಣೆಗಳನ್ನು ವಿತರಿಸಲು ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಅದರಂತೆ ಈ ಯೋಜನೆಯಡಿ ಅವಶ್ಯಕತೆವಿರುವ ಸಾಧನ ಸಲಕರಣೆಗಳು ಮಂಜೂರಾಗಿ ಈಗಾಗಲೇ ಇಲಾಖೆಗೆ ಸರಬರಾಜಾಗಿದ್ದು, ಈಗಾಗಲೇ ಕಲಬುರಗಿ ಜಿಲ್ಲಾ ವಿಕಲಚೇತನರ ಕಚೇರಿಯಿಂದ ಹಾಗೂ ತಾಲೂಕಾ ಪಂಚಾಯತ್ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಹಲವಾರು ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಈ ಯೋಜನೆಯಡಿ ಸಾಧನ ಸಲಕರಣೆಗಳು ಪಡೆಯದೇ ಇರುವ ಅರ್ಹ ವಿಕಲಚೇತನರು 15 ದಿನಗಳೊಳಗಾಗಿ ಕಲಬುರಗಿ ಜಿಲ್ಲಾ ವಿಕಲಚೇತನರ ಕಚೇರಿಗೆ ಭೇಟಿ ನೀಡಿ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ತಮಗೆ ಮಂಜೂರಾದ ಸಾಧನ ಸಲಕರಣೆಗಳನ್ನು ಯಾವುದೇ ಮುನ್ಸೂಚನೆ ನೀಡದೇ ಅವಶ್ಯಕತೆವಿರುವ ವಿಕಲಚೇತನರಿಗೆ ವಿತರಿಸಲಾಗುತ್ತದೆ.

Contact Your\'s Advertisement; 9902492681

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆಯಾ ತಾಲೂಕಿನ ವಿಕಲಚೇತನರ ವಿವಿದ್ದೋದ್ದೇಶ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲ್ಯೂ) ತಾಲೂಕಾ ಪಂಚಾಯತ್ ಕಚೇರಿ ಅಫಜಲಪೂರ-(ಮೊಬೈಲ್ ಸಂ.9448808141), ಆಳಂದ-(ಮೊಬೈಲ್.ಸಂ. 9741792291), ಚಿತ್ತಾಪೂರ-(ಮೊಬೈಲ್ ಸಂ.9845204328), ಚಿಂಚೋಳಿ-(ಮೊಬೈಲ್ ಸಂ.9880671171), ಜೇವರ್ಗಿ-(ಮೊಬೈಲ್ .ಸಂ.9741875881), ಕಲಬುರಗಿ-(ಮೊಬೈಲ್ .ಸಂ.9972079714), ಸೇಡಂ-(ಮೊಬೈಲ್.ಸಂ.9902417925) ಅಥವಾ ಕಲಬುರಗಿ ಜಿಲ್ಲಾ ವಿಕಲಚೇತನರ ಕಚೇರಿಗೆ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖೆ 08472-235222ಗೆ ಕರೆಮಾಡಿ ಸಂಪರ್ಕಿಸಿ ಮಾಹಿತಿ ಪಡೆದು ಸಲಕರಣೆಗಳನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here