ಮಕ್ಕಳ ಬೆಳವಣಿಗೆಯ ಹಿಂದೆ ತಂದೆಯ ಪಾತ್ರ ಪ್ರಮುಖ: ಬಸವರಾಜ ಹೆಳವರ

0
114

ಕಲಬುರಗಿ: ಪ್ರತಿವರ್ಷ ಜೂನ್ ತಿಂಗಳ ಮೂರನೆಯ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಬದುಕು ರೂಪಿಸಿದ, ಸಂಸ್ಕಾರ ಕಲಿಸಿದ, ಸಮಾಜದಲ್ಲಿ ಅಸ್ತಿತ್ವವನ್ನು ಒದಗಿಸಿಕೊಟ್ಟವರು, ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು. ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ.

ಸುರಪುರ ತಾಲುಕಿನ ಯಾಳಗಿ ಗ್ರಾಮದಲ್ಲಿ ಯಲ್ಲಪ್ಪ ಬಿ. ಹೆಳವರ ಅವರಿಗೆ ಹೆತ್ತ ಮಕ್ಕಳಾದ ಬಸವರಾಜ ಹೆಳವರ, ಅನಿಲಕುಮಾರ ಹೆಳವರ, ರಾಮಮ್ಮ ಮತ್ತು ರೇಣುಕಾ ಅವರು ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಸರಳವಾಗಿ ಮನೆಯಲ್ಲೇ ಆಚರಿಸುವ ಮೂಲಕ ತಂದೆಗೆ ಅಭಿನಂದನೆ ಮತ್ತು ಗೌರವ ಸಲ್ಲಿಸಿ, ತಂದೆಯ ಮಹತ್ವ ಎತ್ತಿ ಹಿಡಿದರು. ಅಕ್ಕರೆಯ ಅಪ್ಪನಿಗೆ ಕೃತಜ್ಞತೆ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ‌ಮಾತನಾಡಿದ ಸಮಾಜ ಸೇವಕ ಬಸವರಾಜ ಹೆಳವರ ವಿಶ್ವ ಅಪ್ಪಂದಿರ ದಿನದಂದು ಕುಟುಂಬದ ಆಧಾರ ಸ್ತಂಭವಾಗಿರುವ ತಂದೆಗೆ ಸಂತೋಷದಿಂದ ಸಂಭ್ರಮಿಸಲು ಮಕ್ಕಳಿಗೆ ಅವಕಾಶ ಸಿಕ್ಕಂತಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಮೊದಲ ಮಾರ್ಗದರ್ಶಕನೇ ಅಪ್ಪ. ತಂದೆಯ ಆಶಿರ್ವಾದ ಪಡೆದ ನಾವೆಲ್ಲರೂ ಪುಣ್ಯವಂತರು. ಜೀವನದ ಪ್ರತಿ ಕ್ಷಣದಲ್ಲೂ ತಂದೆ- ತಾಯಿಯ ಮೇಲಿನ ಪ್ರೀತಿ‌ ಮಮತೆ ಕಡಿಮೆಯಾಗದಿರಲಿ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here