ಮಕ್ಕಳಿಂದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

0
44

ಯಾದಗಿರ: ಭಾರತೀಯರು ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ. ಜೂನ್ 21 ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ, ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಹಳ ವಿಜೃಂಬಣೆಯಿಂದ ಆಚರಿಸುತ್ತಿದ್ದು, ಪ್ರಸ್ತುತ ಮಹಾಮಾರಿ ಕರೋನಾ ವೇಗವಾಗಿ ಹರಡುತ್ತಿರುವ ಕಾರಣದಿಂದ ಈ ವರ್ಷ ‘ಮನೆಯಲ್ಲೇ ಇದ್ದು, ಯೋಗವನ್ನು ಆಚರಿಸಿ’ ಎನ್ನುವ ಘೋಷ ವಾಕ್ಯದೊಂದಿಗೆ ಮನೆಯಿಂದಲೇ ಯೋಗ ಕಾರ್ಯಕ್ರಮ ಆಚರಿಸಲು ಭಾರತ ಸರಕಾರದ ಆಯುಷ ಮಂತ್ರಾಲಯ ಸೂಚಿಸಿದೆ.

ಹಣದ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಆರೋಗ್ಯ ಸಂಪತ್ತಿಗಾಗಿ ಯೋಗಾಸನ ಮಾಡುವುದು ಅಗತ್ಯವಾಗಿದೆ. ದುರಾಲೋಚನೆ ದೂರವಾಗಿ, ಉತ್ತಮ ಯೋಚನೆಗಳೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಿಸಬಹುದು. ಸರಕಾರದ ಮಾರ್ಗಸೂಚಿಯಂತೆ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸುರಪುರ ತಾಲುಕಿನ ಯಾಳಗಿ ಗ್ರಾಮದ ಸಮಾಜ ಸೇವಕ ಹಾಗುಹ ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ವಾಯ್. ಹೆಳವರ ಅವರ ಮನೆಯ ಮಾಳಿಗೆಯ ಮೇಲೆ ಪುಟ್ಟ ಮಕ್ಕಳು ಮತ್ತು ‌ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಆಚರಿಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮಾನಪ್ಪ ಹೆಳವರ, ಭೀಮಣ್ಣ ಹೆಳವರ, ಯಲ್ಲಪ್ಪ ಹೆಳವರ, ವಿದ್ಯಾಶ್ರಿ, ರೇಣುಕಾ, ರಾಮವ್ವ, ಶಂಕ್ರಮ್ಮ, ಲಕ್ಷ್ಮೀಬಾಯಿ, ಅಕ್ಷಯಕುಮಾರ, ಅವಿನಾಶ, ಶ್ರೀಕಾಂತ, ಆಂಜನೇಯ, ಚೇತನ್, ಸುದಿಕ್ಷಾ, ಸುಪ್ರೀತ, ಶಿವಶರಣ ಗೋವಾ, ನವೀನ್, ಸಮೀಕ್ಷಾ ಮತ್ತು ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here