ಕಲಬುರಗಿ: ಕೋವಿಡ್-19 ನಿಯಂತ್ರಣಕ್ಕಾಗಿ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಅವರ ನೇತೃತ್ವದಲ್ಲಿ ಹಾಗರಗಾ ರಸ್ತೆಯ ಇಂಡಿಯನ್ ಇಸ್ಲಾಮಿಕ್ ಶಾಲೆಯಲ್ಲಿ ಸಾರ್ವಜನಿಕರಿಗೆ ಉಚಿತ ಕೋವಿಡ್ ವ್ಯಾಕ್ಸಿನ್ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಸ್ತೇಗಿರ್ ಅಹ್ಮದ್ ಕೋವಿಡ್ ತಡೆಗೆ ಕೋವಿಡ್ ವ್ಯಾಕ್ಸಿನ್ ಅಗತ್ಯವಾಗಿದ್ದು, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸೂಸೈಟಿಯಿಂದ ಮೂರನೇ ಬಾರಿ ಈ ವ್ಯಾಕ್ಸಿನ್ ನೀಡುವ ಕಾರ್ಯಾ ಹಮ್ಮಿಕೊಳಲಾಗಿದೆ. ಸಾರ್ವಜನಿಕರು ಇಂದು ಸಂಜೆ 5 ಗಂಟೆಯ ವರೆಗೆ ಶಾಲೆಯಲ್ಲಿ ವ್ಯಾಕ್ಸಿನ್ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಿರ್ ಹಾಶಮ್ ಅಲಿ ಖತೀಬ್, ಸೂಸೈಟಿಯ ಅಜಹರ್ ಅಲಿ,ಅಬ್ದುಲ್ ಮಜೀದ್, ಅಬ್ದುಲ್ ರಜಾಕ್, ಇಬ್ರಾಹಿಮ್ ಮಂತ್ರಿ, ಮಹ್ಮದ್ ಗೌಸೋದಿನ್ ಕಾರಿಗಾರ್, ಸಾಜಿದ್ ಅಲಿ ರಂಜೋಳ್ವಿ, ಅಲ್ ಹಜ್ ಚಾಂದ್ ಸಾಬ್, ಮೊಹ್ಮದ್ ಅಕ್ರಮ್, ಶೌಕತ್ ಅಲಿ ಖಾನ್, ಸಾದಿಕ್ ಅಲಿ ಫಾತೇಖಾನಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.