ಶಹಾಬಾದ: ನಗರದ ಸಹರಾ ಸಭಾಂಗಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಿಟಿಜನ್ ಕ್ಲಬ್ ಶಹಾಬಾದ ವತಿಯಿಂದ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಮಾತನಾಡಿ, ೧೮ ವ? ಮೇಲ್ಪಟ್ಟವರಿಗೆ ಸಿಟಿಜನ್ ಕ್ಲಬ್ ಸದಸ್ಯರ ಸಹಕಾರದೊಂದಿಗೆ ಒಂದು ದಿನದ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ಬಂದು ಲಸಿಕೆ ಪಡೆಯಬಹುದು. ಲಸಿಕೆ ಪಡೆಯುವವರು ಸಾಮಾಜಿಕ ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅದರಲ್ಲೂ ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.
ಸಿಟಿಜನ್ ಕ್ಲಬ್‌ನ ಅಧ್ಯಕ್ಷ ಯಾಸಿನ್ ಹುಸೇನ್ ಚಿಟ್ ಮಾತನಾಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅನ್ ಲಾಕ್ ಮಾಡಿದ್ದಾರೆ.ಕೊರೊನಾ ಬರೋದಿಲ್ಲ ಎಂದು ಅನಾವಶ್ಯಕವಾಗಿ ತಿರುಗಾಡಬೇಡಿ.ಮೊದಲು ಮೊದಲನೇ ಹಾಗೂ ಎರಡನೇ ಲಸಿಕೆಯನ್ನು ಪಡೆದುಕೊಳ್ಳುವವರು ಮುಂದೆ ಬನ್ನಿ. ಕೊರೊನಾ ಹೋಗಲಾಡಿಸಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ.ಯಾವುದೇ ರೀತಿ ಅಸಡ್ಡೆ ತೋರದಿರಿ ಎಂದು ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಡಾ.ಖತೀಜಾ, ಡಾ.ಶಂಕರ,ಡಾ.ದಶರಥ ಜಿಂಗಾಡೆ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಯುಸೂಫ ನಾಕೇದಾರ, ಸಂಜಯ ರಾಠೋಡ, ರಾಹುತರಾಯ, ಪ್ರಕಾಶ, ಸಂಧ್ಯಾರಾಣಿ, ವಾಣೀಶ್ರೀ, ಜಯಶ್ರೀ, ವಿಜಯಲಕ್ಷ್ಮಿ, ಪದ್ಮಾವತಿ, ಸಿಟಿಜನ್ ಕ್ಲಬ್‌ನ ಉಪಾಧ್ಯಕ್ಷ ಜಮೀರ್ ಬೇಗ್, ಸಹರಾ ಇಬ್ರಾಹಿಂ ಸೇಠ ಸರ್ವ ಸದಸ್ಯರು ಇದ್ದರು.
ನಗರದ ವಿವಿಧ ಪ್ರದೇಶಗಳಾದ ಸಹರಾ ಸಭಾಂಗಣ ಹಳೆಶಹಾಬಾದ, ಅಶೋಕ ನಗರ,ಪಠಾಣ ಗಲ್ಲಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಅಭಿಯಾನ ನಡೆಸಿ ಸುಮಾರು ೫೦೮ ಜನರಿಗೆ ಲಸಿಕೆ ನೀಡಲಾಯಿತು.