ಕಲಬುರಗಿ : ಪ್ರತಿದಿನ ನಿಯಮಿತವಾಗಿ ಯೋಗ ಮಾಡುವುದರಿಂದ ರೋಗ ಬರದಂತೆ ನೋಡಿಕೊಳ್ಳಬಹುದು ಎಂದು ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷ ಮಚೇಂದ್ರನಾಥ ಮೂಲಗೆ ಅವರು ತಿಳಿಸಿದರು.
ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಯೋಗವು ದೇಹ ಮತ್ತು ಮನಸ್ಸ ಒಂದಗೂಡಿಸುವುದೇ ಯೋಗ, ಯೋಗ ಮತ್ತು ಪ್ರಾಣಾಯಮದಿಂದ ರೋಗಮುಕ್ತ ಜೀವನ ನಡೆಸಲು ಸಾಧ್ಯವಾಗಿದೆ. ಪ್ರತಿನಿತ್ಯ ಯೋಗ, ಪ್ರಾಣಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಇಂದಿರಾ ಶೇಟಕಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿತ್ಯ ಒಂದಿಷ್ಟು ಸಮಯವನ್ನು ಯೋಗಕ್ಕಾಗಿ ಮೀಸಲಿಡಬೇಕು. ಧ್ಯಾನ, ಯೋಗದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಪ್ರೊ.ದಯಾನಂದ ಹೊಡಲ್ ಸ್ವಾಗತಿಸಿದರು. ಡಾ.ಸುನಂದಾ ವಾಂಜರಖೇಡೆ ಅವರು ವಂದಿಸಿದರು. ಪ್ರೊ.ಸೀನಾ ನಾಯಕ, ಪ್ರೊ.ಮಹೇಶ ನೀಲೆಗಾರ, ಪ್ರೊ.ವಿಜಯಕುಮಾರ ಜಿ. ಸಲಗಾಪೂರ ಪ್ರೊ.ನಯನಾ ಶಹಾ, ವಿರೇಶ ಹಿರೇಮಠ ಉಪಸ್ಥಿತರಿದ್ದರು. ಆನ್‌ಲೈನ್ ಮೂಲಕ ಮಹಾವಿದ್ಯಾಲಯದ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.