ಶಹಾಬಾದ: ಕಾರ್ಮಿಕ ಇಲಾಖೆಯವರು ಮುಂಬರುವ ದಿನಗಳಲ್ಲಿ ಇಎಸ್‌ಐ ಆಸ್ಪತ್ರೆಯನ್ನು ನಮ್ಮ ಸುರ್ಪದಿಗೆ ನೀಡಿದರೆ ಇದನ್ನು ತಾಲೂಕಾ ಆಸ್ಪತ್ರೆಯನ್ನಾಗಿ ಮತ್ತು ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ.ಆರ್.ನಿರಾಣಿ ಹೇಳಿದರು.
ಅವರು ಮಂಗಳವಾರ ನಗರದ ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸದ್ಯ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ.ಮುಂದೆ ಇದನ್ನು ಕಾರ್ಮಿಕ ಇಲಾಖೆಯವರು ಇಎಸ್‌ಐಯನ್ನು ಆಸ್ಪತ್ರೆಯನ್ನು ಮುಂದುವರಿಸಿಕೊಂಡು ಹೋಗುವುದಾದರೆ ನಾವು ನವೀಕರಣಗೊಳಿಸಿದ ಹಣವನ್ನು ಅವರು ಭರಿಸಲಿದ್ದಾರೆ.ಒಂದು ವೇಳೆ ರಾಜ್ಯ ಸರ್ಕಾರವನ್ನೇ ಮುಂದುವರಿಸಿಕೊಂಡು ಹೋಗಲು ತಿಳಿಸಿದರೇ ಇದನ್ನು ತಾಲೂಕಾ ಆಸ್ಪತ್ರೆಯನ್ನಾಗಿ ಮಾಡಲಾಗುತ್ತದೆ.ಅಲ್ಲದೇ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದರು.
ನಗರೋತ್ಥಾನ ಮೂರನೇ ಹಂತದಲ್ಲಿ ಸೇತುವೆ ಕಾಮಗಾರಿ, ರಸ್ತೆ ಕಾಮಗಾರಿ ಅತ್ಯಂತ ಕಳಪೆ ಕಾಮಗಾರಿಯಾಗಿದ್ದರೇ, ಲಿಖಿತ ರೂಪದಲ್ಲಿ ನೀಡಿ, ಆ ಬಗ್ಗೆ ಕೆಡಿಪಿ ಸಭೆಯಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ನಗರಸಭೆಯ ಕಟ್ಟಡ ಹಳೆಯದಾಗಿದ್ದು ಹೊಸದಾದ ಕಟ್ಟಡಕ್ಕೆ ಅನುದಾನ ನೀಡಬೇಕು.ಎಸ್‌ಟಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.ಇದರಿಂದ ಕೆಲಸಗಳಾಗುತ್ತಿಲ್ಲ.ಅದನ್ನು ಬೇಗನೆ ಕೈಗೊಳ್ಳಲು ಆದೇಶಿಸಬೇಕು. ನಗರದ ಉದ್ಯಾನವನಕ್ಕೆ ವಿಶೇಷ ಅನುದಾನ ಒದಗಿಸಬೇಕು.ಅಲ್ಲದೇ ನಗರದಲ್ಲಿ ಆಟದ ಮೈದಾನ (ಸ್ಟೇಡಿಯಮ್) ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಸೇರಿದಂತೆ ಇನ್ನೂ ಬೇಡಿಕೆಗಳ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.
ಅದಕ್ಕೆ ಸಚಿವರು ನಗರೋತ್ಥಾನದಿಂದ ನೀಡಲಾಗುವ ಅನುದಾನವನ್ನು ಬಳಸಿಕೊಂಡು ನಗರಸಭೆಯ ಕಟ್ಟಡವನ್ನು ನಿರ್ಮಾಣ ಮಾಡಿಕೊಳ್ಳಬಹುದು.ಅಲ್ಲದೇ ಒಂದೇ ಸಮಯದಲ್ಲಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಹಂತಹಂತವಾಗಿ ಮಾಡಲಾಗುವದು.ಅಲ್ಲದೇ ತಮಗೆ ಅವಶ್ಯವಾದ ಕಾಮಗಾರಿಯನ್ನು ತಿಳಿಸಿದರೇ ಕೆಕೆಆರ್‌ಡಿಬಿಯಿಂದಲೂ ಅನುದಾನ ಒದಗಿಸಲಾಗುತ್ತದೆ.ಅದಕ್ಕಾಗಿ ನಾವಿ ವಿಷನ್ ೨೦೫೦ ಯೋಜನೆಯನ್ನು ಹಾಕಿಕೊಂಡಿದ್ದೆವೆ.ಇದನ್ನು ಮೂರು ಹಂತಗಳಲ್ಲಿ ಜಿಲ್ಲೆ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳುತ್ತೆವೆ ಎಂದರು.
ಎನ್‌ಇಕೆಆರಟಿಸಿ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿ?ತ್ ಸದಸ್ಯ ಬಿ.ಜಿ.ಪಾಟೀಲ, ಚಿಂಚೋಳಿ ಶಾಸಕ ಅವಿನಾಶ ಜಾಧವ, ಕೃ? ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಎಸಿ ರಮೇಶ ಕೋಲಾರ, ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಅಧಿಸೂಚಿತ ಕ್ಷೇತ್ರ ಸಮಿತಿಯ ಅಧಿಕಾರಿ ಪೀರಶೆಟ್ಟಿ ಉಪಸ್ಥಿತರಿದ್ದರು.