ಕಲಬುರಗಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುವ ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್ ಗಳನ್ನು ಮಂಗಳವಾರ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಕಾರ್ಮಿಕರಿಗೆ ವಿತರಿಸಿದರು.
ಮಂಗಳವಾರ ಜಿಲ್ಲೆಯ ಶಹಾಬಾದ ಇ.ಎಸ್.ಐ.ಸಿ. ಅಸ್ಪತ್ರೆಯ ನವೀಕರಣ ವೀಕ್ಷಣೆಗೆ ಆಗಮಿಸಿದ ಉಸ್ತುವಾರಿ ಸಚಿವರು ಇಲ್ಲಿ ಕಾರ್ಯನಿರತ ಸುಮಾರು ೧೫೦ ಮಹಿಳಾ ಮತ್ತು ಪುರು? ಕಟ್ಟಡ ಕಾರ್ಮಿಕರಿಗೆ ಕಿಟ್ ಗಳನ್ನು ವಿತರಿಸಿದರು.
ಮಹಿಳಾ ಕಾರ್ಮಿಕರಿಗೆ ವಿತರಿಸಲಾದ ಗುಲಾಬಿ ಕಿಟ್ ನಲ್ಲಿ ಹ್ಯಾಂಡವಾಶ್ ಸ್ಯಾನಿಟೈಸರ್, ಸೋಪ್ , ಬಟ್ಟೆ ಸೋಪ್, ಮಾಸ್ಕ್ ಹಾಗೂ ಸ್ಯಾನಿಟರಿ ಪ್ಯಾಡ್ ಗಳಿವೆ. ಅದೇ ರೀತಿ ಪುರು? ಕಾರ್ಮಿಕರಿಗೆ ವಿತರಿಸಲಾದ ಕಪ್ಪು ಬಣ್ಣದ ಕಿಟ್ ನಲ್ಲಿ ಸ್ಯಾನಿಟೈಸರ್ ಹ್ಯಾಂಡ್ ವಾಶ್, ಸೋಪ್ , ಬಟ್ಟೆ ಸೋಪ್ ಮತ್ತು ಮಾಸ್ಕ್ ಒಳಗೊಂಡಿದೆ.
ಈ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿ?ತ್ತಿನ ಶಾಸಕ ಬಿ.ಜಿ. ಪಾಟೀಲ, ಸಹಾಯಕ ಆಯುಕ್ತ ರಮೇಶ ಕೋಲಾರ, ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪ್ರೊಬೇ?ನರ್ ಕಾರ್ಮಿಕ ಅಧಿಕಾರಿ ಡಾ.ದತ್ತಾತ್ರೇಯ ಗಾದಾ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ, ಎನ್.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋ? ಕುಲಕರ್ಣಿ, ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.