ನಿರಂತರವಾಗಿ ಸುರಿದ ಮಳೆ: ದೇವಾಪುರ ಭಾಗದಲ್ಲಿ ಭತ್ತ ನಾಟಿ ಆರಂಭ

0
29

ಸುರಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿದಿದ್ದರಿಂದ ರೈತರಲ್ಲಿ ಹರ್ಷವನ್ನು ಮೂಡಿಸಿದೆ.

ಈಗಾಗಲೇ ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿನ ರೈತರು ಹತ್ತಿ ತೊಗರಿ ಹೆಸರು ಬಿತ್ತಣಿಕೆ ಮಾಡಿ ಮಳೆಗಾಗಿ ಎದುರು ನೋಡುತ್ತಿದ್ದವರಿಗೆ ಮಳೆ ವರವಾಗಿದೆ.ಅಲ್ಲದೆ ತಾಲೂಕಿನ ದೇವಾಪುರ ಶೆಳ್ಳಗಿ ಮತ್ತಿತರೆ ಗ್ರಾಮಗಳಲ್ಲಿನ ಹಳ್ಳ ಮತ್ತು ಹೊಳೆಯ ದಡದಲ್ಲಿನ ರೈತರು ಮಳೆಯನ್ನು ಲೆಕ್ಕಿಸದೆ ಭತ್ತದ ನಾಟಿಯನ್ನು ಆರಂಭಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ದೇವಾಪುರ ಗ್ರಾಮದ ಪ್ರಗತಿಪರ ರೈತ ಚನ್ನಪ್ಪಗೌಡ ಮಾತನಾಡಿ, ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿತುವ ಮಳೆಯಿಂದಾಗಿ ರೈತರಿಗೆ ಅನುಕೂಲವಾಗಿದೆ.ನಮ್ಮ ದೇವಾಪುರ ಭಾಗದ ರೈತರು ಮಳೆಯಿಂದಾಗಿ ಭತ್ತ ನಾಟಿಗೆ ವರದಾನವಾಗಿದೆ.ಈಗಾಗಲೇ ಅನೇಕ ದಿನಗಳಿಂದ ಭತ್ತದ ಸಸಿ ಬೆಳೆಸಿ ನೀರಿಗಾಗಿ ಎದುರು ನೋಡುತ್ತಿದ್ದೇವು.ಕೃಷ್ಣಾ ಕಾಲುವೆಗಳಿಗೂ ನೀರು ಬಾರದಿರುವುದರಿಂದ ಹತ್ತಿ ಬೆಳೆಗೆ ನೀರು ಅವಶ್ಯಕವಾಗಿತ್ತು.

ಇಂತಹ ಸಂದರ್ಭದಲ್ಲಿ ಎರಡು ದಿನಗಳಿಂದ ಸುರಿದ ಮಳೆ ಅನುಕೂಲ ಮಾಡಿದೆ.ಇದರಿಂದಾಗಿ ನಾವು ಈಗ ಭತ್ತ ನಾಟಿಯನ್ನು ಆರಂಭಿಸಿದ್ದು ಎಲ್ಲಾ ರೈತರಿಗೆ ಮಳೆ ವರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here