ಸುರಪುರ: ಸಸಿ ನೆಟ್ಟು ಕಂದಾಯ ದಿನಾಚರಣೆ

0
10

ಸುರಪುರ:ಕಂದಾಯ ದಿನಾಚರಣೆ ಅಂಗವಾಗಿ ಆಚರಣೆ ನಗರದ ತಹಸೀಲ್ ಕಚೇರಿ ಆವರಣದಲ್ಲಿ ಸಸಿ ನೆಟ್ಟು ನೀರೆರೆಯುವ ಮೂಲಕ ಕಂದಾಯ ದಿನವನ್ನು ಹಸಿರೋತ್ಸವದ ದಿನವನ್ನಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿಯವರು ಮಾತನಾಡಿ,ಸಮಾಜದ ಅಭೀವೃಧ್ಧಿಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆ ಪ್ರಮುಖವಾಗಿದೆ.ಅದರಂತೆ ಕೊರೊನಾ ಸಂದರ್ಭದಲ್ಲಿ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಗಲಿರಳು ಸೇವೆ ಮಾಡುವ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.ಅಲ್ಲದೆ ಅನೇಕ ಜನ ಕಂದಾಯ ಸಿಬ್ಬಂದಿಗಳು ಕೊರೊನಾ ಸಂದರ್ಭದಲ್ಲಿ ಕರ್ತವ್ಯಕ್ಕಾಗಿ ಕೊರೊನಾಕೆ ತುತ್ತಾಗಿರುವ ಉದಾಹರಣೆಗಳು ಇವೆ.ಅಲ್ಲದೆ ಗ್ರಾಮಗಳ ಅಭೀವೃಧ್ಧಿಯಲ್ಲೂ ಕಂದಾಯ ಇಲಾಖೆಯ ಪಾತ್ರ ಪ್ರಮುಖವಾಗಿದೆ.ಇಂತಹ ಎಲ್ಲಾ ಕಂದಾಯ ಇಲಾಖೆಯ ಸೇವೆಯನ್ನು ಸ್ಮರಿಸುವ ಕಂದಾಯ ದಿನವನ್ನು ಆಚರಿಸುವುದು ಸ್ತುತ್ಯರ್ಹವಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಅನೇಕ ಜನ ಕಂದಾಯ ಇಲಾಖೆಯ ಸಿಬ್ಬಂದಿಗಳು ಕೂಡ ಸಸಿಗೆ ನೀರೆರೆಯುವ ಮೂಲಕ ಕಂದಾಯ ದಿನಾಚರಿಸಿದರು.

ಈ ಸಂದರ್ಭದಲ್ಲಿ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಸಿರಸ್ಥೆದಾರರಾದ ಸೋಮನಾಥ ನಾಯಕ ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಪ್ರದೀಪ ನಾಲ್ವಡೆ ಉಪಾಧ್ಯಕ್ಷ ನಟರಾಜ, ಅರವಿಂದ,ಪ್ರಥಮ ದರ್ಜೆ ಸಹಾಯಕ ಚನ್ನಬಸವ,ದ್ವೀತಿಯ ದರ್ಜೆ ಸಹಾಯಕ ಅಶೋಕ ಸೊನ್ನದ,ಕಂಪ್ಯೂಟರ್ ಆಪರೇಟರ್ ಭೀಮು ಯಾದವ ಹಾಗೂ ಸಿಬ್ಬಂದಿಗಳಾದ ರವಿ ನಾಯಕ,ಶಿವಕುಮಾರ,ಹುಚ್ಚಪ್ಪ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here