“ನಮ್ಮ ಅರಸು” ಕೃತಿ ಲೋಕಾರ್ಪಣೆಗೆ ಸಮಿತಿಯಿಂದ ಗಣ್ಯರಿಗೆ ಆಹ್ವಾನ

0
23

ಬೆಂಗಳೂರು: ಡಿ.ದೇವರಾಜ ಅರಸು ಅವರ ಕುರಿತಾದ ನಮ್ಮ ಅರಸು ಕೃತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ ಮತ್ತು ದಿನಾಂಕ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವನ್ನು ದೇವರಾಜ ಅರಸು ಮ್ರತಿಮೆ ಸಮಿತಿ ಕೋರಿ ಮನವಿಯನ್ನು ಸಲ್ಲಿಸಲಾಯಿತು.

ಇಂದು ನಗರದ ಅವರ ನಿವಾಸದಲ್ಲಿ ಡಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯು ಭೇಟಿ ನೀಡಿ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಹಳ ವರ್ಷಗಳ ವರೆಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಆಳಿದ ರಾಜಕಾರಣಿಗಳಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸ್ ಅವರ ಹೆಸರು ಸ್ಮರಣಿಯವಾದುದು,ಹಿಂದುಳಿದ ವರ್ಗಗಳ ಏಳಿಗೆಗೆ ,ಅಲ್ಪಸಂಖ್ಯಾತ ರ,ಶೋಷಿತ ಸಮುದಾಯಗಳಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದ ಸಮ ಸಮಾಜದ ಮುಂಚೂಣಿಗೆ ತಂದವರು ಇಂತಹ ಮಹಾನ್ ಚೇತನವರನ್ನು ಕುರಿತಾಗಿ ಹಿರಿಯ ಪತ್ರಕರ್ತ ಪ್ರಗತಿ ಪರ ಚಿಂತಕರಾದ ಬಸವರಾಜು ಮೆಗಲಕೇರಿ ಯವರು ಸಂಪಾದಿಸಿರುವ “ನಮ್ಮ ಅರಸು ” ( ದೇವರಾಜ ಅರಸ್ ಅವರ ಆಡಳಿತವನ್ನು ,ವ್ಯಕ್ತಿತ್ವವನ್ನು ಸುಧಾರಣೆಯನ್ನು ಹತ್ತಿರದಿಂದ ಬಲ್ಲವರಿಂದ ಸಂಗ್ರಹಿಸಿದ ಲೇಖನ ಸಂಗ್ರಹ) ಕೃತಿಯನ್ನು ಇಂದಿನ ತಲೆಮಾರಿಗೆ ತಲುಪಿಸುವ ಆಶಯದಿಂದ ಹೊಂದಿದೆ.

Contact Your\'s Advertisement; 9902492681

ನಾಡಿನ ಜನತೆಗೆ ದೇವರಾಜ ಅರಸು ಅವರ ನಂತರ ಸಿದ್ದು, ಅಧಿಕಾರ ಅವಧಿಯಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಅವಕಾಶ ವಂಚಿತ ಸಮುದಾಯಗಳಿಗೆ ಹತ್ತು ಹಲವು ಭಾಗ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ರುವ ತಾವು ಈ ಕೃತಿಯನ್ನು ಲೋಕಾರ್ಪಣೆ ಗೊಳಿಸಿ ಅರಸುರವರ ಚಿಂತನೆಗಳಿಗೆ ಮತ್ತಷ್ಟು ಮೌಲ್ಯವನ್ನು ದೊರಕಿಸಿಕ್ಡಬೇಕೆಂದು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್ , ಪ್ರೊ.ಕೆ.ಎಸ್.ಭಗವಾನ್ , ರಾಜ್ಯ ಪ್ರಧಾನ ಸಚಾಲಕರಾದ ಡೈರಿ ವೆಂಕಟೇಶ್, ಮಡ್ಡಿಕೆರೆ ಗೋಪಾಲ್, ರಾಜಶೇಖರ್ ಕದಂಬ. ಎಂ.ಜಿ.ಆರ್.ಅರಸ್ ಹಾಗೂ ಜಿಲ್ಲಾ ಸಂಚಾಲಕ ಕೃಷ್ಣೇಗೌಡ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here