ಚಿಂಚೋಳಿ: ತಾಲೂಕಿನ ಕೋಡ್ಲಿ, ಸುಂಠಾಣ, ಸುಲೆಪೇಟ, ಕೊಂಡಮ್ಮಪಲ್ಲಿ, ಪೆಂಚನಪಳ್ಳಿ, ಹೊಡೆಬೀರನಹಳ್ಳಿ, ದಸ್ತಾಪೂರ, ಚಿಂಚೋಳಿ ಭಾಗಗಳಲ್ಲಿ ಕೃಷಿ ವಿಜ್ಞಾನಕೇಂದ್ರ ಹಾಗೂ ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಬೆಳೆ ಸ್ಥಿತಿಗತಿ ಅರಿಯಲುಕ್ಷೇತ್ರ ಭೇಟಿ ನೀಡಲಾಯಿತು.
ತೊಗರಿ, ಉದ್ದು, ಹೆಸರು ಮತ್ತು ಸೋಯಾಬಿನ್ ೨೦ ರಿಂದ ೨೫ ದಿನಗಳ ಬೆಳವಣಿಗೆ ಹಂತಲಿದ್ದು, ಕೆಲವು ಕಡೆ ಸೋಯಾಬಿನ್ ಮತ್ತು ಹೆಸರು ಬೆಳೆಯಲ್ಲಿ ಎಲೆ ತಿನ್ನುವ ಹುಳು, ಕಾಂಡ ನುಸಿ ಭಾದೆಕಂಡು ಬಂದಿದೆ. ಬಹುತೇಕ ಸೋಯಾಬಿನ್ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.ತಾಲೂಕಿನಲ್ಲಿ ಹಳ್ಳಿಯಿಂದ ಹಳ್ಳಿಗೆ ಮಳೆಯ ಹಂಚಿಕೆ ವ್ಯತ್ಯಾಸಕಂಡಿದೆ. ಮಣ್ಣಿನಲ್ಲಿ ನೀರು ಹಿಡಿದುಕೊಳ್ಳುವ ಸಾಮರ್ಥ್ಯಕೂಡ ಬಿಸಿಲಿನ ತಾಪಕ್ಕೆಕಡಿಮೆಯಾಗುತ್ತಿದೆ. ಸಸ್ಯಗಳ ಬೆಳವಣಿಗೆ ಪೋಷಕಾಂಶ ಅತ್ಯವಶ್ಯಕವಾಗಿದ್ದು, ರೈತರು ಬೆಳೆಯ ಸಾಲುಗಳಲ್ಲಿ ಕುಂಟೆಯ ನಂತರಎನ್‌ಪಿಕೆ ಮಿಶ್ರಿತ ಪೋಷಕಾಂಶ ೨ ಗ್ರಾಂ. ಹಾಗೂ ಥಯೋಮಿಕ್ಸಾಂ ೦.೩ ಗ್ರಾಂಅಥವ ಬೇವಿನ ಎಣ್ಣೆ ೨ ಮೀ. ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಯವರಾದಡಾ.ಜಹೀರ್‌ಅಹೆಮದ್, ಚಿಂಚೋಳಿ ರೈತ ಸಂಪರ್ಕಕೇಂದ್ರದ ಕೃಷಿ ಅಧಿಕಾರಿಗಳಾದ ಅಭಿಲಾಷ, ರೈತ ಸಂಪರ್ಕಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಗುರುಪದಪ್ಪಾಕೋರಿ, ರಘುವೀರ್‌ಹಾಗೂಕೃಷಿ ಸಂಜೀವಿನಿ ಸಂಚಾರಿ ಪ್ರಯೋಗಾಲಯ ಸಹಾಯಕರಾದ ವರುಣ ಹಾಗೂ ರಾಮುಕ್ಷೇತ್ರ ಭೇಟಿಯಲ್ಲಿ ಉಪಸ್ಥಿತರಿದ್ದರು.
ತೊಗರಿಆಧಾರಿತ ಬೆಳೆಯು ಹೆಚ್ಚಿನ ವ್ಯಾಪ್ತಿಯಲ್ಲಿದೆ. ಹವಾಮಾನ ಮುನ್ಸೂನೆಯಂತೆ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ.