ಅಲ್ಪಸಂಖ್ಯಾತರರಿಗೆ ಪಿಎಂ ಜನ ವಿಕಾಸ ಯೋಜನೆಯಲ್ಲಿ ಸೇರ್ಪಡೆ: ಸಂಸದ ಜಾಧವ್

0
113

ನವದೆಹಲಿ: ಕಲಬುರಗಿ ಜಿಲ್ಲೆಯ ಚಿ೦ಚೋಳಿ ಮತ್ತು ಇತರೆ ಎಲ್ಲಾ ತಾಲೂಕುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿದ್ದು. ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮದಡಿ ಸೇರಿಸಲು ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಸಭೆಯಲ್ಲಿ ಸಂಸದ ಡಾ. ಉಮೇಶ ಜಾಧವ ಪ್ರಸ್ತಾಪಿಸಿದ್ದರು. ಅಲ್ಲದೆ ಲೋಕ ಸಭೆಯಲ್ಲಿ ಸಹ ಧ್ವನಿಯತ್ತಿದ್ದಾರೆ.

ಇದೀಗ ಶೀಘ್ರವೇ ಕಲಬುರಗಿ ಜಿಲ್ಲೆಯನ್ನು ಪಿಎಮ್‌ಜಿವಿಕೆ ಅಡಿಯಲ್ಲಿ ಸೇರಿಸುವುದಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ. ರವಿಕುಮಾರ ಭರವಸೆ ಸಿಕ್ಕಿದ್ದು, ಅಲ್ಪಸಂಖ್ಯಾತರ ಸಮುದಾಯದ ಸಂರ್ವಾಂಗಿಣ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಜನ ವಿಕಾಸ ಯೋಜನೆಯಡಿಯಲ್ಲಿ ಸೇರಿಸುವುದು ಬಹು ಮುಖ್ಯವಾಗಿದೆ ಎಂದು ಸಂಸದ ಜಾಧವ್ ತಿಳಿಸಿದ್ದಾರೆ.

Contact Your\'s Advertisement; 9902492681

ಬಿಜೆಪಿ ಕಾರ್ಯಾಕಾರಣಿ ಸದಸ್ಯರಾದ ಕೆ.ಎಮ್ ಬಾರಿ ಇ- ಮೀಡಿಯಾ ಲೈನ್ ಜೊತೆ ದೂರವಾಣಿಯಲ್ಲಿ ಮಾತನಾಡಿ ಕಲಬುರಗಿ ಜಿಲ್ಲೆಯ ಅಲ್ಪಸಂಖ್ಯಾತರ ಸಮಗ್ರ ಏಳಿಗೆಗೆ ಸಂಸದ ಜಾಧವ್ ಹೆಚ್ಚು ಕಾಳಿಜಿ ವಹಿಸಿದ್ದಾರೆ, ಸಂಸದರು ಪ್ರತಿಯೊಂದು ಉನ್ನತ ಸಭೆಗಳಲ್ಲಿ ಪ್ರಸ್ತಾಪ ಮಾಡಿ ಗಮನ ಸೇಳೆಯುತ್ತಿದ್ದಾರೆ.

ಇತ್ತೀಚೆಗೆ ಸಂಸದ ಜಾಧವ್ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಅಪ್ತ ಕಾರ್ಯದರ್ಶಿಗೆ ಭೇಟಿ ನೀಡಿ ಮನವಿ ಮಾಡಿದ್ದು, ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಯುಜಿಡಿ, ಅಂಗನವಾಡಿ, ರಸ್ತೆ ನಿರ್ಮಾಣ, ಉದ್ಯೋಗ ಆಧಾರಿತ ಸ್ಕಿಲ್ ಡೌಲಪಮೆಂಟ್ ಕಾರ್ಯಕ್ರಮ, ಶಿಕ್ಷಣ ಕ್ಷೇತ್ರವಾದ ಮದರಸಾ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಮಟ್ಟದ ಶಿಕ್ಷಣ ನೀಡುವುದು ಮತ್ತು ಹೌಸಿಂಗ್ ಯೋಜನೆಯಲ್ಲಿ ಸಮುದಾಯಕ್ಕೆ 15% ಮಿಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಾಮ ನಿರ್ದೇಶನ ನಿರ್ದೇಶಕರಾದ ಸದ್ದಾಮ್ ಅವರು ಜೊತೆಗಿದ್ದರು.

ಅಲ್ಲದೇ ತೊಗರಿ ಕಣಜವಾಗಿರುವ ಕಲಬುರಗಿ ಜಿಲ್ಲೆಯ ವಾಣಿಜ್ಯ ಕ್ಷೇತ್ರದಲ್ಲಿ ಗುರುತಿಸಿ ಅಭಿವೃದ್ಧಿ ಪಥದಲ್ಲಿ ಸಾಗಿದುವ ನಿಟ್ಟಿನಲ್ಲಿ ಕೇಂದ್ರ ಸರಕಾದ ಜೊತೆ ಸಂಸದ ಜಾಧವ್ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ಬಾರಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here